

ಮೈಸೂರು: ಊಟಿರಸ್ತೆಯಲ್ಲಿನ ಜೆಎಸ್‌ಎಸ್ ಕಾಲೇಜು ಬಳಿ ಬಸ್‌ನಿಲ್ದಾಣದ ಮೇಲೆ ನಿರ್ಮಿಸಿರುವ ಗುಂಬಜ್ ತೆರವುಗೊಳಿಸಬೇಕೆಂದು ಒತ್ತಾಯಿಸಿ, ರಾಷ್ಟ್ರೀಯ ಹಿಂದು ಸಮಿತಿ ಅಧ್ಯಕ್ಷ ವಿಕಾಸ್ ಶಾಸ್ತ್ರಿ ಮಂಗಳವಾರ ಏಕಾಂಗಿ ಪ್ರತಿಭಟನೆ ನಡೆಸಿದರು.
ನಾವು ಪಾಕಿಸ್ತಾನದಲ್ಲಿದ್ದೇವೋ ಅಥವಾ ಭಾರತದಲ್ಲೋ ಎಂಬ ಅನುಮಾನ ಮೂಡುತ್ತಿದೆ. ಸಾರ್ವಜನಿಕ ವಲಯದಲ್ಲಿರುವ ಬಸ್ ನಿಲ್ದಾಣವನ್ನು ಹೇಗೆ ಮಸೀದಿ ರೀತಿ ಕಟ್ಟುತ್ತೀರಾ? ಇದನ್ನು ಒಂದು ವಾರದೊಳಗೆ ತೆರವುಗೊಳಿಸದಿದ್ದರೆ ಎಲ್ಲಾ ಹಿಂದುಪರ ಸಂಘಟನೆಗಳು ಸೇರಿ ಧ್ವಂಸ ಮಾಡಬೇಕಾಗುತ್ತದೆ. ಬಾಬರ್ ಮಸೀದಿಯನ್ನೇ ಉರುಳಿಸಿದ ನಮಗೆ ಈ ಬಸ್ ನಿಲ್ದಾಣ ದೊಡ್ಡದಲ್ಲ.
ಇಲ್ಲಿನ ಶಾಸಕರು ನಗರಪಾಲಿಕೆ ಅಧಿಕಾರಿಗಳು ಆ ಗುತ್ತಿಗೆದಾರನಿಗೆ ಬುದ್ಧಿ ಹೇಳಿ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.