ಮನೆ ಮೆಟ್ಟಿಲು ಹತ್ತುವಾಗ ಆಯತಪ್ಪಿ ಬಿದ್ದು ಯೋಧ ಸಾವು

A soldier end life when he fell down while climbing the stairs
Published on

ಮಂಡ್ಯ: ರಜೆ ಮೇಲೆ ಊರಿಗೆ ಬಂದಿದ್ದ ಯೋಧ  ಮನೆ ಮೆಟ್ಟಿಲು ಹತ್ತುವಾಗ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಈ ಘಟನೆ ಮಂಡ್ಯದಲ್ಲಿ ನಡೆದಿದೆ.

ಸಂದೀಪ್ ಕುಮಾರ್ (38) ಮೃತ ಯೋಧ.  ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಾಮನಹಳ್ಳಿ ನಿವಾಸಿ‌ಯಾಗಿದ್ದರು.  ರಜೆ ಮೇಲೆ ಊರಿಗೆ ಬಂದಿದ್ದ ಯೋಧ  ಮನೆ ಮೆಟ್ಟಿಲು ಹತ್ತುವಾಗ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ನಿನ್ನೆ ರಾತ್ರಿ ಮನೆಯ ಮೆಟ್ಟಿಲು ಹತ್ತುವಾಗ ಆಯಾತಪ್ಪಿ ಬಿದ್ದು ಗಂಭೀರವಾಗಿ ಗಾಯ ಗೊಂಡಿದ್ದರು. ತಕ್ಷಣವೇ ಮದ್ದೂರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದ ಕುಟುಂಬಸ್ಥರು.

ಹರಿಯಾಣದ ಸಿಹಾರ್ ಗಡಿಯ 140 ರೆಜಿಮೆಂಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದೀಪ್. ಇತ್ತೀಚೆಗೆ ರಜೆ ಮೇಲೆ ಚಾಮನಹಳ್ಳಿಗೆ ಆಗಮಿಸಿದ್ದರು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಯೋಧ ಸಂದೀಪ್ ಕುಮಾರ್ ಕೊನೆಯುಸಿರೆಳೆದಿದ್ದಾರೆ.  ಮನೆ ಮಗನನ್ನು ಕಳೆದು ಕೊಂಡ ಕುಟುಂಬಸ್ಥರ  ಆಕ್ರಂದನ ಮುಗಿಲು ಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net