ಎಲ್ಐಸಿ ಕಚೇರಿ ಬಳಿ ನಿಲ್ಲಿಸಿದ್ದ ಬೈಕ್​​ನಲ್ಲಿ ಪ್ರತ್ಯಕ್ಷವಾದ ಹಾವು ಕಂಡು ಬೆಚ್ಚಿಬಿದ್ದ ಸ್ಥಳೀಯರು!

Bikesnake
Published on

ಕೋಲಾರ: ನಗರದ ಎಲ್ಐಸಿ ಕಚೇರಿ ಬಳಿ ನಿಲ್ಲಿಸಿದ್ದ ಬೈಕ್​​ಮೇಲೆ ಇನ್ನೇನು ಹತ್ತಿ ಕೂರಬೇಕೆನ್ನುವಷ್ಟರಲ್ಲೇ ಹಾವು ಪ್ರತ್ಯಕ್ಷವಾಗಿದ್ದು, ಸ್ಥಳೀಯರ ಮುಂಜಾಗರೂಕತೆಯಿಂದ ಸವಾರ ಅಪಾಯದಿಂದ ಪಾರಾಗಿದ್ದಾರೆ.

ರಸ್ತೆ ಬದಿಯಲ್ಲಿ ಸಾಲು ಸಾಲಾಗಿ ದ್ವಿಚಕ್ರವಾಹನಗಳನ್ನು ನಿಲ್ಲಿಸಲಾಗಿತ್ತು, ಅಲ್ಲಿ ಓಡಾಡುವ ಸ್ಥಳೀಯರು ಇದೇ ಬೈಕ್​ ಪಕ್ಕ ನಿಂತುಕೊಳ್ಳು ಹೋಗಿದ್ದಾರೆ. ಈ ವೇಳೆ ಹಾವು ಕಾಣಿಸಿಕೊಂಡಿದೆ. ಗಾಬರಿಗೊಂಡ ಸ್ಥಳೀಯರು ಬೈಕ್​ ಬಳಿ ಬಂದ ಸವಾರನಿಗೆ ತಿಳಿಸಿದ್ದು, ಸದ್ಯ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ. 

ಬೈಕ್​ನಲ್ಲಿ ಸುತ್ತಿಕೊಂಡಿದ್ದ ಈ ಹಾವು 5 ಅಡಿ ಉದ್ದವಿದ್ದು, ಎಲ್ಲು ಹೋಗಲಾಗದೇ ಅಲ್ಲೆ ಸಿಲುಕಿಕೊಂಡು ಒದ್ದಾಡುತ್ತಿತ್ತು. ಸ್ಥಳೀಯರೇ ಹಾವು ರಕ್ಷಿಸಲು ಮುಂದಾದರೂ, ವಾಟರ್​ ಬಾಟಲಿಯಲ್ಲಿ ತುಂಬಿಸಿ ರಕ್ಷಿಸಲು ಹೋದ ಸ್ಥಳೀಯರ ಕೈಗೆ ಸಿಗದ ಹಾವು ತಪ್ಪಿಸಿಕೊಂಡು ಹೋಯಿತು. ಹಾವು ಸಿಗಲಿಲ್ಲ ಎಂಬ ಬೇಸರ ಕೆಲವರಿಗಾದರೆ, ಸದ್ಯ ಹಾವಿನಿಂದ ಬಚಾವಾದ ಸವಾರ ಮಾತ್ರ ನಿರಾಳರಾಗಿದ್ದಂತು ಸತ್ಯ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net