ಮನೆ ಮುಂದೆ ಬೀಡು ಬಿಟ್ಟಿದ್ದ ಹಾವು ಸೆರೆ

Oplus_0
Oplus_0
Published on

ಧಾರವಾಡ: ಇಲ್ಲಿನ ಗಿರಿನಗರದ ಶಿವಲಿಂಗಯ್ಯ ಪಾಟೀಲ ಎಂಬುವರ ಮನೆ ಎದುರು ಹಾವೊಂದು ಹಲವು ದಿನಗಳಿಂದ ಬೀಡು ಬಿಟ್ಟಿತ್ತು. ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡು ಅಲ್ಲಿನ ನಿವಾಸಿಗಳ ನಿದ್ದೆಗೆಡಿಸಿತ್ತು. ಈ ಕುರಿತು ಸ್ಥಳೀಯರು ವೈಲ್ಡ್ ಲೈಫ್ ವೆಲ್‌ಫೇರ್ ಸೊಸೈಟಿಯ ಉರಗ ರಕ್ಷಕ ಸ್ನೇಕ್ ಯಲ್ಲಪ್ಪನಿಗೆ ಮಾಹಿತಿ ನೀಡಿದ್ದರು. ಸೋಮವಾರ ಸ್ಥಳಕ್ಕೆ ತೆರಳಿದ ಸ್ನೇಕ್ ಯಲ್ಲಪ್ಪ, ಸುಮಾರು 9 ಅಡಿ ಉದ್ದದ ಕೇರೆ ಹಾವನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net