ಹುಚ್ಚು ನಾಯಿ ಕಡಿದಿದ್ದ ಬಸವ ಸಾವು

Published on

ಮೈಸೂರು: ಹುಚ್ಚುನಾಯಿ ಕಡಿದು ಅನಾರೋಗ್ಯಕ್ಕೀಡಾಗಿದ್ದ ಮೇಟಗಳ್ಳಿ ಮಹಾಲಿಂಗೇಶ್ವರ ದೇವಾಲಯದ ಬಸವ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದೆ.

ಕೆಲ ದಿನಗಳ ಹಿಂದೆ ಬಸವನಿಗೆ ಹುಚ್ಚುನಾಯಿ ಕಡಿದಿತ್ತು. ಇದರಿಂದ ರೇಬಿಸ್ ಸಮಸ್ಯೆಯಿಂದ ನಾಯಿಯಂತೆ ಶಬ್ಧ ಮಾಡುತ್ತಾ ಸ್ಥಳೀಯರಿಗೆ ಭೀತಿ ಸೃಷ್ಟಿಸಿತ್ತು. ಗ್ರಾಮದ ಬಸವನನ್ನು ಸ್ಥಳೀಯರು ಕಟ್ಟಿಹಾಕಿ ಚಿಕಿತ್ಸೆ ಕೊಡಿಸಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ದೇವಾಲಯದ ಪಕ್ಕದಲ್ಲಿರುವ ಜಾಗದಲ್ಲಿ ವಿಧಿವಿಧಾನದಂತೆ ಅಂತ್ಯಕ್ರಿಯೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net