

ಎಚ್.ಡಿ. ಕೋಟೆ: ಕುಡಿತಕ್ಕೆ ಚಟಕ್ಕೆ ದಾಸನಾದವ ಆರೋಗ್ಯದಲ್ಲಿ ಏರುಪೇರಾಗಿ ಆಯಸ್ಸು ಮುಗಿಯುವುದಕ್ಕೂ ಮುನ್ನ ಸಾವನ್ನಪ್ಪುವ ಹಂತಕ್ಕೆ ತಲುಪುತ್ತಿದ್ದಾನೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ ತಿಳಿಸಿದರು.
ಪಟ್ಟಣದ ಗುರುಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅಯೋಜಿಸಿದ್ದ 1848ನೇ ಮದ್ಯವರ್ಜನ ಶಿಬಿರದಲ್ಲಿ ಐದನೇ ದಿನವಾದ ಮಂಗಳವಾರ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಸಮಾಜದಲ್ಲಿರುವ ಪ್ರಮುಖ ಚಟಗಳಲ್ಲಿ ಕುಡಿತದ ಚಟ ಮನುಷ್ಯನಿಗೆ ಮಾರಕವಾಗಿದೆ, ಸಮಾಜದಲ್ಲಿ ಆಗುತ್ತಿರುವ ಅನಾಹುತಗಳು, ಅತ್ಯಾಚಾರಗಳು, ಕೊಲೆಗಳು ಕುಡಿತದಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದೆ ಎಂದು ತಿಳಿಸಿದರು.
ಕುಡಿತಕ್ಕೆ ದಾಸನಾದ ವ್ಯಕ್ತಿ ತಾನು ದುಡಿದ ಹಣವನ್ನೆಲ್ಲ ಕುಟುಂಬದ ಬಗ್ಗೆ ಯೋಚಸದೇ ಕುಡಿತಕ್ಕೆ ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಪುರಸಭಾ ಸದಸ್ಯ ಮಿಲ್ ನಾಗರಾಜು, ಕಸಾಪ ಅಧ್ಯಕ್ಷ ಕನ್ನಡಪ್ರಮೋದ್, ಪತ್ರಕರ್ತ ಸತೀಶ್ ಆರಾಧ್ಯ, ಛಾಯಾಗ್ರಾಹಕ ಸಂಘದ ಅಧ್ಯಕ್ಷ ರವಿಕುಮಾರ್, ಮಾಜಿ ಅಧ್ಯಕ್ಷ ಮನೋಜ್, ಸಂಸ್ಥೆಯ ಮೇಲ್ವಿಚಾರಕರಾದ ರೇಖಾ, ವರ್ಷಾ, ಭಾರತಿ, ವ್ಯವಸ್ಥಾಪಕ ಗಂಗಾಧರ್, ಸೇವಾ ಪ್ರತಿನಿಧಿ ಶಾಂತ, ನವಜೀವನ ಸಮಿತಿ ಲಕ್ಷ್ಮಣ್, ಸ್ವಾಮಿ ಇದ್ದರು.