ತಮ್ಮನ ಪತ್ನಿಯ ಕಿರುಕುಳಕ್ಕೆ ಬೇಸತ್ತು ಸಾವಿನ ದಾರಿ ಹಿಡಿದ ತಾಯಿ-ಮಗ! ಸಾವಿಗೂ ಮುನ್ನ ಮನದ ನೋವನ್ನು ಬಿಚ್ಚಿಟ್ಟ ಮಹಿಳೆ

sucide case
Published on

ಬೆಂಗಳೂರು: ಹೊಸಗುಡ್ಡದಹಳ್ಳಿಯ ಮನೆಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗನ ಶವ ಪತ್ತೆಯಾಗಿದ್ದು, ಸಾವಿಗೂ ಮುನ್ನ ಮಾಡಿದ ಸೆಲ್ಫಿ ವಿಡಿಯೋದಲ್ಲಿ ಮನದ ನೋವನ್ನು ಮಹಿಳೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನನ್ನ ತಮ್ಮನ ಪತ್ನಿಯ ನಡೆಗೆ ಬೇಸತ್ತು ಸಾವಿನ ಮನೆಯ ಕದ ತಟ್ಟುತ್ತಿರುವುದಾಗಿ ಹೇಳಿದ್ದಾರೆ.

ಲಕ್ಷ್ಮಮ್ಮ(48) ಮತ್ತು ಮದನ್(13) ಮೃತ ದುರ್ದೈವಿಗಳು. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?: ನನ್ನ ತಮ್ಮ ಸಿದ್ದೇಗೌಡ ಸ್ವಲ್ಪ ಪೆದ್ದ. ಆತನಿಗೆ ರಂಜಿತ ಎಂಬಾಕೆ ಜತೆ ಮದುವೆ ಮಾಡಿಸಿದೆ. ನಾನೇ 50 ಸಾವಿರ ರೂ. ಮೌಲ್ಯದ ಚಿನ್ನದ ಸರವನ್ನೂ ಅವರಿಗೆ ಕೊಟ್ಟಿದ್ದೆ. ನನ್ನ ತಮ್ಮನಿಗೋಸ್ಕರ ನಾನು ಸಾಯ್ತಿದ್ದೀನಿ. ರಂಜಿತಾಳನ್ನ ತಂದು ನಾನು ತಪ್ಪು ಮಾಡಿದೆ. ಪೊಲೀಸ್​ ಠಾಣೆ- ಕೋರ್ಟ್ ಅಂತ ಕಿರುಕುಳ ನೀಡ್ತಿದ್ದಳು. ಇದನ್ನು ನನಗೆ ಸಹಿಸಲು ಆಗ್ತಿಲ್ಲ. ನನ್ನ ಸಾವಿಗೆ ಸವಿತಾ, ಶಿವಣ್ಣ, ಲಕ್ಷ್ಮೀ, ಪುಟ್ಟ, ಸಿದ್ದರಾಜ, ಶಿವಲಿಂಗಿ, ಶಂಕರ, ಸಿದ್ದರಾಮ ಎಂಬುವರು ಕಾರಣ. ನನ್ನ ಮತ್ತು ನನ್ನ ಮನಗ ಅಂತ್ಯಸಂಸ್ಕಾರವನ್ನು ನನ್ನ ಗಂಡ ಹಾಗೂ ನನ್ನ ತಮ್ಮ ಮಾಡಬೇಕು... ಎಂದು ಲಕ್ಷ್ಮಮ್ಮ ವಿಡಿಯೋ ಮಾಡಿದ್ದಾರೆ.

ಲಕ್ಷ್ಮಮ್ಮರ ಸಹೋದರ ಸಿದ್ದೇಗೌಡ ಮತ್ತು ರಂಜಿತ ದಂಪತಿ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಈ ಸಂಬಂಧ ಕೆರಗೂಡು ಪೊಲೀಸ್ ಠಾಣೆಯಲ್ಲಿ ಗಂಡ ಸಿದ್ದೇಗೌಡ, ಈತನ ಅಕ್ಕ ಲಕ್ಷ್ಮಮ್ಮ, ಭಾವ ಶಿವಲಿಂಗೇಗೌಡ ಸೇರಿದಂತೆ 9 ಜನರ ವಿರುದ್ಧ ರಂಜಿತ ಕೇಸು ದಾಖಲಿಸಿದ್ದರು. ಇದರಿಂದ ಬೇಸತ್ತ ಲಕ್ಷ್ಮಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net