ಕರಾವಳಿ ಕೋಗಿಲೆ, ಖ್ಯಾತ ಗಾಯಕಿ ಶೀಲಾ ದಿವಾಕರ್ ನಿಧನ

sheela divakar
Published on

ಮಂಗಳೂರು: ಆರ್ಯಭಟ ಪ್ರಶಸ್ತಿ ಪುರಸ್ಕೃತೆ ಮತ್ತು ಖ್ಯಾತ ಗಾಯಕಿ ಶೀಲಾ ದಿವಾಕರ್ ನಿಧನರಾದರು. ಅನಾರೋಗ್ಯದ ಹಿನ್ನೆಲೆ ಕೆಲ ದಿನಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದರು.

ಮಂಗಳೂರಿನ ಶೀಲಾ ದಿವಾಕರ್, ಸಂಗೀತದ ಮೂಲಕ ಸನಾತನ ಪರಂಪರೆಯನ್ನ ಉಳಿಸಿ ಬೆಳೆಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದರು. ಸಂಗೀತ ಕ್ಷೇತ್ರದಲ್ಲಿ ಅವಳಿ ಸಹೋದರಿಯರಾಗಿ ಶೀಲಾ ಮತ್ತು ಶೈಲಾ ತಮ್ಮದೇ ಆದ ಪ್ರಸಿದ್ಧಿ ಪಡೆದುಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ವಿದ್ವತ್ ಸನ್ಮಾನ ಕರಾವಳಿ ಕೋಗಿಲೆ ಶೀಲಾ ಅವರ ಮುಡಿಗೇರಿತ್ತು. 3000ಕ್ಕೂ ಅಧಿಕ ಪ್ರತಿಷ್ಠಿತ ವೇದಿಕೆಗಳಲ್ಲಿ ಜನಮೆಚ್ಚುಗೆಯ ಕಾರ್ಯಕ್ರಮ ನೀಡಿದ್ದ ಹೆಗ್ಗಳಿಕೆ ಇರದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net