ದೇಗುಲಗಳ ಜೀರ್ಣೋದ್ಧಾರಕ್ಕೆ ಪ್ರಾಮಾಣಿಕ ಪ್ರಯತ್ನ

ಅರಸೀಕೆರೆಯ ಕರಿಯಮ್ಮ ದೇವಿ ದೇಗುಲ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿಗೆ ಕೆ.ಎಂ.ಶಿವಲಿಂಗೇಗೌಡ ಭೂಮಿಪೂಜೆ ನೆರವೇರಿಸಿದರು. ಸಮೀವುಲ್ಲಾ, ಯೋಗೀಶ್, ಕಿರಣ್ ಕುಮಾರ್, ಮನೋಹರ್ ಇದ್ದರು.
ಅರಸೀಕೆರೆಯ ಕರಿಯಮ್ಮ ದೇವಿ ದೇಗುಲ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿಗೆ ಕೆ.ಎಂ.ಶಿವಲಿಂಗೇಗೌಡ ಭೂಮಿಪೂಜೆ ನೆರವೇರಿಸಿದರು. ಸಮೀವುಲ್ಲಾ, ಯೋಗೀಶ್, ಕಿರಣ್ ಕುಮಾರ್, ಮನೋಹರ್ ಇದ್ದರು.
Published on

ಅರಸೀಕೆರೆ: ಕ್ಷೇತ್ರದಲ್ಲಿ ದೇಗುಲಗಳ ಜೀರ್ಣೋದ್ಧಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಎಂದು ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ನಗರದ ಕರಿಯಮ್ಮ ದೇವಿ ದೇಗುಲ ಆವರಣದಲ್ಲಿ ಇತ್ತೀಚೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಶಾಸಕನಾಗಿ ಆಯ್ಕೆಯಾದ ಬಳಿಕ ಕ್ಷೇತ್ರದಲ್ಲಿ ದೇಗುಲಗಳ ನಿರ್ಮಾಣ ಮತ್ತು ಜೀರ್ಣೋದ್ಧಾರವನ್ನು ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಮಾಡಿದ್ದೇನೆ. ನಗರದ ಅಧಿದೇವತೆಗಳಾಗಿರುವ ಕರಿಯಮ್ಮ ಹಾಗೂ ಮಲ್ಲಿಗೆಮ್ಮ ದೇವಿಯರ ದೇಗುಲಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದೇನೆ. ಸದ್ಯ ಪ್ರವೇಶ ದ್ವಾರ, ಅಡುಗೆ ಮನೆ, ಇಂಟರ್‌ಲಾಕ್, ಕಾಂಕ್ರೀಟ್ ಹಾಕಲು ತೀರ್ಮಾನ ಮಾಡಲಾಗಿದೆ. ನಾಡಿನ ಉದ್ದಗಲಕ್ಕೂ ಸಹಸ್ರಾರು ಭಕ್ತ ಸಮೂಹ ಹೊಂದಿರುವ ದೇವಿಯರ ಸುಕ್ಷೇತ್ರದ ಪ್ರಗತಿಗೆ ಶ್ರಮಿಸಲಿದ್ದೇನೆ ಎಂದು ಭರವಸೆ ನೀಡಿದರು.

ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ ಮಾತನಾಡಿ, ನಗರೋತ್ಥಾನ ಹಾಗೂ ಹದಿನೈದನೆ ಹಣಕಾಸು ನಿಧಿ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ದೇವಾಲಯ ಸಮಿತಿ ಅಧ್ಯಕ್ಷ ಕೆ.ಸಿ.ಯೋಗೀಶ್, ಕಾರ್ಯದರ್ಶಿ ಕಿರಣ್ ಕುಮಾರ್, ಪೌರಾಯುಕ್ತ ಕೃಷ್ಣ ಮೂರ್ತಿ, ನಗರಸಭೆ ಉಪಾಧ್ಯಕ್ಷ ಮನೋಹರ್, ಸದಸ್ಯರಾದ ದರ್ಶನ್, ರಾಜಶೇಖರ್, ಎಂ.ಆರ್.ವೆಂಕಟಮುನಿ, ರಾಜಣ್ಣ, ದರ್ಶನ್ ದಾಸ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net