ಆಬಲವಾಡಿ ಗ್ರಾಪಂ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ

ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ಆಟದ ಮೈದಾನಕ್ಕೆ ಗ್ರಾಪಂ ಅಧ್ಯಕ್ಷ ಸುರೇಶ್ ಭೂಮಿಪೂಜೆ ನೆರವೇರಿಸಿದರು. ಚುಂಚಮ್ಮ, ವೀರಣ್ಣ, ಎಂ.ಪುಟ್ಟಸ್ವಾಮಿ, ಡಿ.ಪುಟ್ಟಸ್ವಾಮಿ, ಸಾಕಮ್ಮ, ದುಂಡಮ್ಮ ಇದ್ದರು.
ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ಆಟದ ಮೈದಾನಕ್ಕೆ ಗ್ರಾಪಂ ಅಧ್ಯಕ್ಷ ಸುರೇಶ್ ಭೂಮಿಪೂಜೆ ನೆರವೇರಿಸಿದರು. ಚುಂಚಮ್ಮ, ವೀರಣ್ಣ, ಎಂ.ಪುಟ್ಟಸ್ವಾಮಿ, ಡಿ.ಪುಟ್ಟಸ್ವಾಮಿ, ಸಾಕಮ್ಮ, ದುಂಡಮ್ಮ ಇದ್ದರು.
Published on

ಮದ್ದೂರು: ಆಬಲವಾಡಿ ಗ್ರಾಮ ಪಂಚಾಯಿತಿ ಸಮಗ್ರ ಅಭಿವೃದ್ಧಿಗೆ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ನಿರಂತರವಾಗಿ ಶ್ರಮಿಸಲಾಗುವುದು ಎಂದು ಅಧ್ಯಕ್ಷ ಸುರೇಶ್ ತಿಳಿಸಿದರು.

ಆಬಲವಾಡಿ ಗ್ರಾಮದಲ್ಲಿ ಅಂದಾಜು 10 ಲಕ್ಷ ರೂ.ವೆಚ್ಚದಲ್ಲಿ ಆಟದ ಮೈದಾನಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ನೀರು, ಸ್ವಚ್ಛತೆ ಸೇರಿದಂತೆ ಯಾವುದೇ ರೀತಿಯ ಮೂಲ ಸೌಕರ್ಯಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಅವರು ನೀಡಿರುವ ಮೊದಲ ಹಂತದ 5 ಲಕ್ಷ ರೂ.ಅನುದಾನದಲ್ಲಿ ಗ್ರಾಮದ ಆಂಜನೇಸ್ವಾಮಿ ದೇವಸ್ಥಾನ ಹಿಂಭಾಗವಿರುವ ಪಂಚಾಯಿತಿಗೆ ಸೇರಿರುವ ಸ್ಥಳದಲ್ಲಿ ಆಟದ ಮೈದಾನ, ಸಿಸಿ ರಸ್ತೆ, ಚರಂಡಿ ನಿರ್ಮಾಣವಾಗಲಿದೆ. ಮುಂದಿನ ದಿನಗಳಲ್ಲಿ ಆಟದ ಮೈದಾನದಲ್ಲಿ ಜೀಮ್, ವಾಕಿಂಗ್ ಪಾತ್ ನಿರ್ಮಾಣ ಮಾಡಲಾಗುವುದು. ಇದರಿಂದ ಗ್ರಾಮಸ್ಥರು ಹಾಗೂ ಯುವಕರಿಗೆ ಅನುಕೂಲವಾಗಲಿದೆ ಎಂದರು.

ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುತ್ತಿದೆ. ಪಂಚಾಯಿತಿಯಲ್ಲಿ ಗ್ರಾಮಸ್ಥರು ಹಾಗೂ ರೈತರ ಕೆಲಸಗಳು ತ್ವರಿತಗತಿಯಲ್ಲಿ ಮಾಡಿಕೊಡುವ ಮೂಲಕ ಅನುಕೂಲ ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಚುಂಚಮ್ಮ, ಯಜಮಾನರಾದ ವೀರಣ್ಣ, ಪುಟ್ಟಸ್ವಾಮಿ, ತಿಮ್ಮೇಶ್, ಗೋವಿಂದಣ್ಣ, ಮುಖಂಡರಾದ ದೊಳ್ಳತಿಮ್ಮನ ಪುಟ್ಟಸ್ವಾಮಿ, ದೋ.ಪುಟ್ಟಸ್ವಾಮಿ, ಬಲರಾಮು, ಚಿಟ್ಟೆ ಸುರೇಶ್, ಗುರು, ಶ್ರೀಧರ್, ಶಿವರಾಮ್, ಪುಟ್ಟಸ್ವಾಮಿ, ದುಂಡಮ್ಮ, ಸಾಕಮ್ಮ, ಅಶೋಕಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net