ಸ್ವಯಂ ಉದ್ಯೋಗ ಕಲ್ಪಿಸಲು ಪ್ರಾಮಾಣಿಕ ಯತ್ನ

7KDR5
ವಿಧಾನ ಪರಿಷತ್‌ಗೆ ಆಯ್ಕೆಯಾದ ಡಾ.ಧನಂಜಯ ಸರ್ಜಿ ಅವರನ್ನು ಕಡೂರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಅಭಿನಂದಿಸಿದರು. ಬಿ.ಪಿ.ದೇವಾನಂದ್, ಅಡಿಕೆ ಚಂದ್ರು, ಟಿ.ಆರ್.ಲಕ್ಕಪ್ಪ, ಮೋಹನ್, ಮಲ್ಲಿಕಾರ್ಜುನ್, ಭೈರೇಗೌಡ, ಕೆ.ಆರ್.ಚಂದ್ರು ಮತ್ತಿತರಿದ್ದರು.
Published on

ಕಡೂರು: ಕಾರ್ಯಕರ್ತರ ಸಂಘಟನಾತ್ಮಕ ಪರಿಶ್ರಮದಿಂದ ನೈಋತ್ಯ ಪದವೀಧರ ಕ್ಷೇತ್ರದಿಂದ ನನ್ನನ್ನು 25ಸಾವಿರಕ್ಕೂ ಅಧಿಕ ಮತಗಳಿಗೂ ಅಧಿಕ ಮತ ನೀಡಿ ಗೆಲ್ಲಿಸಿದ್ದು, ಅವರ ನಂಬಿಕೆಗೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಡಾ. ಧನಂಜಯ್ ಸರ್ಜಿ ಹೇಳಿದರು.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುವ ಮಾರ್ಗ ಮಧ್ಯೆ ಶುಕ್ರವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಕೊಡಗು ಜಿಲ್ಲೆಗೆ ಎನ್‌ಡಿಸಿ(ನ್ಯಾಷನಲ್ ಡಿಪೆನ್ಸ್ ಅಕಾಡಮಿ) ತರಬೇತಿ ಕಾಲೇಜು, ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಹಿಂದೆ ನೈಋತ್ಯ ಪದವೀಧರ ಕ್ಷೇತ್ರವು 1998ರಿಂದ ಇಲ್ಲಿಯವರೆಗೂ ಬಿಜೆಪಿ ಅಭ್ಯರ್ಥಿಗಳೇ ಆಯ್ಕೆಯಾಗುತ್ತಿದ್ದಾರೆ. ಈ ಬಾರಿಯೂ ಆಯ್ಕೆ ಮಾಡುವ ಮೂಲಕ ಇನ್ನಷ್ಟು ಕೆಲಸ ಮಾಡಲು ಶಕ್ತಿ ತುಂಬಿದ್ದಾರೆ ಎಂದರು.
5 ಜಿಲ್ಲೆಗಳಲ್ಲಿ 20 ಮತದಾರರಿಗೆ ಓರ್ವ ಘಟನಾಯಕರನ್ನು ನೇಮಿಸಿ ಮತದಾರರ ಮನೆ, ಗ್ರಾಮಗಳಿಗೆ ತೆರಳಿ ಬಿಜೆಪಿ ಅಭಿವೃದ್ಧಿ ಬಗ್ಗೆ ತಿಳಿಸಿ ಮತದಾರರ ಮನವೊಲಿಸುವ ಮೂಲಕ ನನ್ನ ಗೆಲುವಿಗೆ ಪ್ರಮುಖ ಕಾರಣರಾಗಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಹೆಚ್ಚು ಸೈನಿಕರಿದ್ದು, ಅಲ್ಲಿ ನ್ಯಾಷನಲ್ ಡಿಪೆನ್ಸ್ ಆಕಾಡಮಿ ಕಾಲೇಜು ಸ್ಥಾಪನೆ. ಶಿವಮೊಗ್ಗದಲ್ಲಿ ಇಎಸ್‌ಐ, ಜ್ಯೋತಿ ಸಂಜೀವಿನಿ ಯೋಜನೆ ಬಳಕೆಗೆ ಅರಿವು ಮೂಡಿಸುವುದು. ಶಿಕ್ಷಕರ ನೇಮಕಾತಿಗೆ ಹೋರಾಟ, ಎಸ್‌ಸಿ, ಎಸ್‌ಟಿ ವಿದ್ಯಾರ್ಥಿ ನಿಲಯಗಳ ಸ್ಥಾಪನೆಗೆ ಒತ್ತು ಹಾಗೂ ಕೌಶಲ್ಯಾಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ಟಿ.ಆರ್.ಲಕ್ಕಪ್ಪ, ಜಿಗಣೇಹಳ್ಳಿ ನೀಲಕಂಠಪ್ಪ, ಎಚ್.ಎಂ.ರೇವಣ್ಣಯ್ಯ, ಎಂ.ಪಿ.ಸುದರ್ಶನ್, ಸಿಗೇಹಡ್ಲು ಹರೀಶ್, ನವೀನ್ ಮತಿಘಟ್ಟ, ಪಂಚನಹಳ್ಳಿ ರಂಗನಾಥ್, ಮಹೇಶ್, ಡಾ.ದಿನೇಶ್, ಕಂಸಾಗರ ವೆಂಕಟೇಶ್, ಕೆ.ಆರ್.ಚಂದ್ರು, ರಾಜಾನಾಯ್ಕ, ಗಂಗಾಧರ್, ಮೋಹನ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net