

ಮೈಸೂರು: ಸಂಪೂರ್ಣ ಲಾಕ್‌ಡೌನ್ ನಡುವೆಯೂ ನಗರದಲ್ಲಿ ಮದುವೆ ಕಾರ್ಯಗಳು ಸರಳವಾಗಿ ನೆರವೇರಿದವು.
ಪೂರ್ವ ನಿಗದಿತ ಮದುವೆ ಸಮಾರಂಭಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿತ್ತು. ಹೀಗಾಗಿ ಅಂತರ ಕಾಯ್ದುಕೊಂಡು ಗರಿಷ್ಠ 50 ಅತಿಥಿಗಳ ಸಂಖ್ಯೆ ಮೀರದಂತೆ ಸರಳವಾಗಿ ಮದುವೆ ಮಾಡಲು ಅನುಮತಿ ನೀಡಿದ್ದರಿಂದ ಶುಭ ಕಾರ್ಯಗಳು ನೆರವೇರಿದವು. ಈ ಸಂದರ್ಭದಲ್ಲಿ ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡಿ ಕರೊನಾ ಹರಡದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿತ್ತು.
ಒಂಟಿಕೊಪ್ಪಲಿನ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ರಾಮಾಚಾರಿ ಮತ್ತು ಐಶ್ವರ್ಯ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ನಿಯಮದಂತೆ ಕಡಿಮೆ ಸಂಖ್ಯೆಯಲ್ಲಿ ಸಂಬಂಧಿಕರು ಮತ್ತು ಸ್ನೇಹಿತರು ಆಗಮಿಸಿದ್ದು, ಶಾಸ್ತ್ರೋಕ್ತವಾಗಿ ಲಗ್ನ ಕಾರ್ಯ ನಡೆಯಿತು.
ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಚಾಮರಾಜನಗರದ ಪುರೋಹಿತ ಎಸ್.ವೆಂಕಟೇಶ್ ಮತ್ತು ಸಾವಿತ್ರ್ಮು ದಂಪತಿ ಪುತ್ರ ಸಿ.ವಿ.ವಲ್ಲೀಶ್ ಮತ್ತು ಬೆಂಗಳೂರಿನ ಪ್ರಕಾಶ್‌ನಗರದ ಶ್ರೀಧರ್ ಮತ್ತು ಅನುಪಮಾ ದಂಪತಿ ಪುತ್ರಿ ಶ್ರೀವಿದ್ಯಾ ಸತಿಪತಿಗಳಾದರು.
ಲಷ್ಕರ್‌ಮೊಹಲ್ಲಾದ ಗೀತಾಮಂದಿರದಲ್ಲಿ ಬೆಂಗಳೂರಿನ ಕಾವ್ಯಾ ಮತ್ತು ತಿಲಕ್‌ನಗರದ ರವಿ ನವದಾಂಪತ್ಯಕ್ಕೆ ಕಾಲಿಟ್ಟರು.
ವಿಜಯನಗರದ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಮೈಸೂರಿನ ಪುಷ್ಪಾ ಹಾಗೂ ವೆಂಕಟೇಶ್ ದಂಪತಿ ಪುತ್ರ ವಿ.ಕೀರ್ತಿ ಮತ್ತು ಬೆಂಗಳೂರಿನ ಶಶಿಕಲಾ ಹಾಗೂ ರಮೇಶ್ ದಂಪತಿ ಪುತ್ರಿ ಬಿ.ಆರ್.ಸ್ಮಿತಾ ವಿವಾಹವಾದರು. ನಗರದ ನಿವಾಸಿಗಳಾದ ಪ್ರದೀಪ್ ಮತ್ತು ಸುಸ್ಮಿತಾ, ರಾಘವೇಂದ್ರ ಮತ್ತು ತಿ.ನರಸೀಪುರದ ಮಧು ಮದುವೆಯಾದರು. ಅಂತೆಯೇ ಬೆಂಗಳೂರಿನ ಮಂಜುನಾಥ್ ಮತ್ತು ನಗರದ ವಿನಿತಾ ವಿವಾಹವಾದರು.