ಪೂಜ್ಯರ ಬದುಕು ತೆರೆದ ಪುಸ್ತಕ, ತ್ಯಾಗ-ಸೇವೆಯ ಪ್ರತೀಕ: ಸಿದ್ದಲಿಂಗ ಶ್ರೀಗಳು

siddalinga swamiji
Published on

ತುಮಕೂರು: ಅಕ್ಷರ ದಾಸೋಹ ಯೋಜನೆಗೆ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನಿಡುವ ಬಗ್ಗೆ ಪ್ರಸ್ತಾಪವಾಗಿದೆ. ಸ್ವಾಮೀಜಿ ಆರಂಭಿಸಿದ ದಾಸೋಹ ಕಲ್ಪನೆಯಿಂದಲೇ ಆ ಕಾರ್ಯಕ್ರಮ‌ ಆರಂಭವಾಗಿದ್ದು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಿರುವಾಗ ಬಿಸಿಯೂಟ ಯೋಜನೆಗೆ ಪೂಜ್ಯರ ಹೆಸರನ್ನು ಪ್ರತ್ಯೇಕವಾಗಿ ಇಡುವ ಅವಶ್ಯಕತೆ ಇಲ್ಲ. ಇನ್ನು ಪೂಜ್ಯರ ಬದುಕು ತೆರೆದ ಪುಸ್ತಕ. ಅವರ ಜೀವನವೇ ನಮಗೆ ಆದರ್ಶ ಎಂದು ಸಿದ್ಧಗಂಗಾ ಮಠದ ಅಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವ ಪ್ರಯುಕ್ತ ಸಿದ್ಧಗಂಗಾ ಕ್ಷೇತ್ರದಲ್ಲಿ ಆಯೋಜಿಸಿದ್ದ ‘ನಡೆದಾಡುವ ದೇವರ ಬಸವ ಭಾರತ’ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಲಿಂಗ ಶ್ರೀಗಳು, ಪರಮಪೂಜ್ಯರು ಲಕ್ಷಾಂತರ ಮನೆಗಳ ಜ್ಯೋತಿ ಬೆಳಗಿಸಿದ್ದಾರೆ. ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಭಕ್ತಿ ಸಮರ್ಪಿಸುವ ನಾವೆಲ್ಲಾ ಭಾಗ್ಯವಂತರು. ಅವರು ತ್ಯಾಗ ಹಾಗೂ ಸೇವೆಯ ಪ್ರತೀಕವಾಗಿದ್ದರು. ನೆರೆದಿರುವ ಎಲ್ಲರ ಹೃದಯದಲ್ಲಿ ಪರಮಪೂಜ್ಯರಿದ್ದಾರೆ ಎಂದರು.

ಪೂಜ್ಯರ ಜನ್ಮದಿನ ಸಂಭ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಭಾಗವಹಿಸಿದ್ದಾರೆ. ಇದು ಅವರ ಮೂರನೇ ಭೇಟಿ. ಗುಜರಾತ್ ಸರ್ಕಾರದಲ್ಲಿ ಏಕಕಾಲದಲ್ಲಿ 12 ಖಾತೆ ನಿರ್ವಹಿಸಿದ ಅವರ ಸಾಮಾರ್ಥ್ಯದ ಪರಿಚಯ ಸಾಕಷ್ಟು ವಿಷಯದಲ್ಲಿ ಈ ದೇಶಕ್ಕಾಗಿದೆ. ಅವರ ದೇಶಭಿವೃದ್ಧಿಯ ಕೆಲಸಗಳಿಗೆ ದೇವರು ಶಕ್ತಿ ನೀಡಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net