ಭಾರಿ ಮಳೆ-ಗಾಳಿಗೆ ಹಾರಿಹೋದ ಶೀಟ್

IMG-20250514-WA0053
Published on

 ಬೈಲುಕುಪ್ಪೆ: ಬೈಲುಕುಪ್ಪೆಯ ಬೆಣಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಭೋವಿ ಕಾಲನಿಯಲ್ಲಿ ಮಂಗಳವಾರ ಸುರಿದ ಭಾರಿ ಮಳೆ -ಗಾಳಿಗೆ ಮಳೆಗೆ ಮನೆಯ ಛಾವಣಿ ಶೀಟ್ ಹಾರಿ ಹೋಗಿವೆ.

ಭೋವಿ ಕಾಲನಿಯಲ್ಲಿ ಕುಮಾರ ಎಂಬುವರ ವಾಸದ ಮನೆ ಭಾರಿ ಮಳೆ-ಗಾಳಿಗೆ ಹಾನಿಯಾಗಿದೆ. ಮನೆಯೊಳಗಿದ್ದ ದಿನಬಳಕೆ ವಸ್ತು ಹಾಗೂ ಫ್ರಿಡ್ಜ್, ಟಿವಿ ದಿನಸಿ ಸಂಪೂರ್ಣ ನಾಶವಾಗಿವೆ. ಮಳೆ ನೀರು ಮನೆಯೊಳಗೆ ತುಂಬಿ ಹರಿದಿದೆ. ಸಂಬಂಧಪಟ್ಟ ಕಂದಾಯ ಗ್ರಾಮ ಲೆಕ್ಕಾಧಿಕಾರಿ ರುದ್ರೇಶ್ ಹಾಗೂ ಬೆಣಗಾಲು ಗ್ರಾಮ ಪಂಚಾಯಿತಿ ಪಿಡಿಒ ಮಂಜುನಾಥ್, ಬೈಲುಕುಪ್ಪೆ ಪೊಲೀಸ್ ಠಾಣೆ ಎಎಸ್‌ಐ ಕುಮಾರಸ್ವಾಮಿ ಹಾಗೂ ಸಿಬ್ಬಂದಿ ಮುದ್ದುರಾಜ್ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ಮನೆ ಸಮೀಪದಲ್ಲಿ ನಿಲ್ಲಿಸಿದ್ದ ಉಪೇಂದ್ರ ಎಂಬುವರ ಲಾರಿಯ ಗ್ಲಾಸ್‌ಗೆ ಶೀಟ್ ಅಪ್ಪಳಿಸಿದೆ. ಒಡೆದು ಹೋಗಿದೆ. ಗ್ರಾಮ ಪಂಚಾಯಿತಿ ಸದಸ್ಯ ಧನರಾಜ್, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net