ಸಂತೃಪ್ತ ಜೀವನಕ್ಕೆ ಅಡ್ಡಿಯಾದ ಬಡಾವಣೆ!

14 09 2025_BGR RURAL_PAGE_02
Published on

ಆನೇಕಲ್​ : ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡು ಖಾಸಗಿ ಬಡಾವಣೆಗಳಲ್ಲಿ ಅನುಮತಿ ಪಡೆಯದೆ ಕೂಲಿ ಕಾರ್ಮಿಕರಿಗಾಗಿ ನಿರ್ಮಿಸಿರುವ ಶೆಡ್​ಗಳಲ್ಲಿ ಕೊಳಚೆ ಹಾಗೂ ಕಸದ ರಾಶಿ ತುಂಬಿದ್ದು, ಕಾರ್ಮಿಕರೂ ಸೇರಿ ಬಡಾವಣೆ ಜನ ಹಾಗೂ ಕಾರ್ಮಿಕರು ನೆಮ್ಮದಿ ಕಳೆದುಕೊಂಡಿದ್ದಾರೆ. 2000ಕ್ಕೂ ಹೆಚ್ಚು ಕಾರ್ಮಿಕರಿಗಾಗಿ ಶೆಡ್​ಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ. ಆದರೆ, ಶೌಚಗೃಹ ಸೇರಿ ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ, ಶೌಚಗೃಹದಲ್ಲಿ ಬಳಸಿದ ನೀರು ಸಹ ಹೊರ ಹೋಗಲು ವ್ಯವಸ್ಥೆ ಮಾಡದ ಕಾರಣ ಶೆಡ್​ಗಳು ಗಬ್ಬು ನಾರುತ್ತಿವೆ. ಬಡಾವಣೆಗಳಲ್ಲಿ 500ಕ್ಕೂ ಹೆಚ್ಚು ಶೆಡ್​, ಮನೆಗಳಿದ್ದು, ಮೂರು ಸಾವಿರಕ್ಕೂ ಹೆಚ್ಚು ಜನ ವಾಸ ಇದ್ದಾರೆ. ಶೆಡ್​ಗಳಿಂದ ಹೊರ ಬರುತ್ತಿರುವ ಕೊಳಚೆ ನೀರಿನ ದುರ್ವಾಸನೆಗೆ ಜನ ಮನೆಯಿಂದ ಹೊರಬರಲು ಸಾಧ್ಯವಾಗದ ಸ್ಥಿತಿ ಇದೆ.

ಸರ್ವೇ ನಂಬರ್​ 77/6ರಲ್ಲಿ ಸುಮಾರು ಎರಡು ಎಕರೆಗೂ ಹೆಚ್ಚು ಖಾಲಿಯಿದ್ದ ಜಾಗದಲ್ಲಿ ಶೆಡ್​ಗಳನ್ನು ನಿರ್ಮಾಣ ಮಾಡಲು ಜಮೀನು ಮಾಲೀಕರು ಅವಕಾಶ ಕೊಟ್ಟಿದ್ದು, ಕೆಲವು ಬಡಾವಣೆ ನಿರ್ಮಾಣ ಮಾಡುತ್ತಿರುವ ಕಂಪನಿಗಳು ಇಲ್ಲಿ ಕಾರ್ಮಿಕರಿಗೆ ಇರಲು ವ್ಯವಸ್ಥೆ ಕಲ್ಪಿಸಿವೆ. ಆದರೆ, ಹಂದಿಗೂಡಿನಂತೆ ಇರುವ ಈ ಶೆಡ್​ಗಳಲ್ಲಿ ಸ್ವಲ್ಪ ಯಾಮಾರಿದರೆ ಕಾರ್ಮಿಕರು ಹಾಗೂ ಕಾರ್ಮಿಕರ ಮಕ್ಕಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವುದು ಗ್ಯಾರಂಟಿಯಾಗಿದೆ.

ಕೊಳಚೆ ನೀರಿನಲ್ಲಿ ಕಾರ್ಮಿಕರ ಮಕ್ಕಳು : ಸಾವಿರಾರು ಜನ ಕಾರ್ಮಿಕರು ವಾಸ ಇರುವ ಶೆಡ್​ಗಳಲ್ಲಿ ಕಾನೂನು ಗಾಳಿಗೆ ತೂರಿ ಪಂಚಾಯಿತಿಯಿಂದಲೂ ಅನುಮತಿ ಪಡೆಯದೆ ಅಕ್ರಮವಾಗಿ ವಾಸಕ್ಕೆ ಯೋಗ್ಯ ಇಲ್ಲದ ಜಾಗದಲ್ಲಿ ಕಬ್ಬಿಣದ ಶೆಡ್​ ನಿರ್ಮಾಣ ಮಾಡಲಾಗಿದೆ. ಕುಡಿಯಲು ಯೋಗ್ಯವಲ್ಲದ ನೀರು ಹಾಗೂ ಸ್ವಚ್ಛತೆ ಇಲ್ಲದ ಜಾಗದಲ್ಲಿ ಕಾರ್ಮಿಕರು ಹಾಗೂ ಅವರ ಮಕ್ಕಳು ವಾಸ ಮಾಡುತ್ತಿದ್ದು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಪಂಚಾತಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

ಶಾಲಾ ಮಕ್ಕಳು ಈ ಬಡಾವಣೆಯ ಸುತ್ತಮುತ್ತ ಓಡಾಡಲು ಸಾಧ್ಯ ಆಗದ ಪರಿಸ್ಥಿತಿ ನಿರ್ಮಾಣ ಆಗಿದೆ. 2,000ಕ್ಕೂ ಹೆಚ್ಚು ಜನ ಕಾರ್ಮಿಕರು ಇಲ್ಲಿ ವಾಸ ಇದ್ದು, ಮಾಂಸ ಆಹಾರದ ಮೂಳೆಗಳು ಸೇರಿ ಆಹಾರ ಪದಾರ್ಥಗಳನ್ನು ಎಸೆಯುತ್ತಿರುವುದರಿಂದ ಬೀದಿ ನಾಯಿ ಹಾವಳಿ ಹೆಚ್ಚಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಹೋದರೆ ಹೋರಾಟಕ್ಕೆ ಮುಂದಾಗುತ್ತೇವೆ. > ನಂದಕುಮಾರ್​ ಸ್ಥಳಿಯ ಬಡಾವಣೆಯ ಪಕ್ಕದಲ್ಲಿ ಕಾರ್ಮಿಕರು ಶೆಡ್​ಗಳಲ್ಲಿ ವಾಸ ಇದ್ದಾರೆ. ಮೂಲಸೌಕರ್ಯ ಕಲ್ಪಿಸಿಲ್ಲ, ಕಾರ್ಮಿಕರು ಪ್ರತಿ ದಿನ ಸ್ನಾನ ಮಾಡಿದ ಕೊಳಚೆ ನೀರು ಹರಿಯಲು ವ್ಯವಸ್ಥೆ ಇಲ್ಲದೆ ಶೆಡ್​ ಒಳಭಾಗದಲ್ಲಿ ತುಂಬಿಸಿ ಹಾಗೆ ಬಿಟ್ಟಿದ್ದಾರೆ. > ರುದ್ರಯ್ಯ ನವ್ಯ ಬಡಾವಣೆಯ ನಿವಾಸಿ ಖಾಸಗಿ ಜಮೀನಿನಲ್ಲಿ ಶೆಡ್​ ನಿರ್ಮಾಣ ಮಾಡಿ ಕಾರ್ಮಿಕರು ವಾಸ ಮಾಡುತ್ತಿರುವ ಬಗ್ಗೆ ದೂರು ಬಂದಿದೆ. ಈ ಸಂಬಂಧ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. > ವಿನಯ್​ ರೆಡ್ಡಿ ಹೆನ್ನಾಗರ ಗ್ರಾಮ ಪಂಚಾಯಿತಿ ಅಧ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net