

ವಿಜಯಪುರ : ಸಮಾಜದ ಪ್ರತಿಯೊಬ್ಬರಿಗೆ ಶಿವ ಪಂಚಾಯತಗಳಾದ ಅನ್ನ, ಅರಿವೆ, ಆಶ್ರಯ, ಔಷಧ ಮತ್ತು ಅರಿವುಗಳು ಸಮನಾಗಿ ಹಂಚಿಕೆಯಾಗಬೇಕು. ಅಂದಾಗಲೇ ಆರ್ಥಿಕ ಸಬಲತೆ ಉಂಟಾಗಿ ಸರ್ವ ಸಮಾನತೆ ನೆಲೆಗೊಳ್ಳಲಿದೆ ಎಂದು ಸಾಹಿತಿ ಕುಮಾರಸ್ವಾಮಿ ಅರಕೇರಿಮಠ ಹೇಳಿದರು.
ನಗರದ ವೀರಶೈವ ಲಿಂಗಾಯತ ಮಹಾಸಭಾದ ಹಾನಗಲ್ಲ ಕುಮಾರಸ್ವಾಮಿ ಸಭಾ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ದತ್ತಿ ಸಮಾರಂಭದಲ್ಲಿ ಶರಣರ ದಾಸೋಹ ತತ್ವ ಕುರಿತು ಉಪನ್ಯಾಸ ನೀಡಿ, ಸಕಲ ಜೀವಾತ್ಮರಿಗೆ ಲೇಸನ್ನುಂಟು ಮಾಡುವುದೇ ಕಾಯಕ-ದಾಸೋಹ ತತ್ವಗಳ ಮೂಲ ಉದ್ದೇಶವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿ.ಸಿ. ನಾಗಠಾಣ ಮಾತನಾಡಿ, ಭೂಮಿ ತೂಕದ ತಾಯಿ ಮಗುವಿಗೆ ಉತ್ತಮ ಸಂಸ್ಕಾರ ನೀಡಿ ಸತ್ಪ್ರಜೆಯನ್ನಾಗಿ ಮಾಡಿ ದೇಶ ಸೇವೆಗೆ ಅರ್ಪಿಸುತ್ತಾಳೆ. ಅದರಿಂದ ಮಗುವಿನಲ್ಲಿ ಸರ್ವೋತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಹೇಳಿದರು.
ಅತಿಥಿ ಡಾ. ಎನ್.ಜಿ. ಮೇಲಶಂಕರ, ಎಸ್.ಜಿ. ನಾಡಗೌಡರ, ಜಗದೀಶ ಹಾಗೂ ಶರಣಪ್ಪ ಕೋರಿ ಭಾಗವಹಿಸಿ ಮಾತನಾಡಿದರು. ಈರಣ್ಣ ತೊಂಡಿಕಟ್ಟಿ ನಿರೂಪಿಸಿದರು. ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಟಿ. ಈಶ್ವರಗೊಂಡ, ಶರಣಪ್ಪ ನಂದಿ, ಎಂ.ಆರ್. ಬಡಿಗೇರ, ಕಾಶಿನಾಥ ಅಣೆಪ್ಪನವರ, ಅಮರೇಶ ಸಾಲಕ್ಕಿ, ಬಸವರಾಜ ಇಂಚಗೇರಿ, ಓಂಕಾರ ಅಥರ್ಗಾ, ಡಾ. ಉಷಾ ಹಿರೇಮಠ, ಜಗದೀಶ ಮೋಟಗಿ, ಬಿ.ಸಿ. ಸಾರವಾಡ, ಎಲ್.ಪಿ. ಬಿರಾದಾರ ಮತ್ತಿತರರಿದ್ದರು.