ಜೈನ ಸಮುದಾಯದ ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್​

16Athni1
Published on

ಅಥಣಿ: ಶೈಣಿಕ ವರ್ಷದಿಂದ ಜೈನ ಧರ್ಮದ ವಿದ್ಯಾರ್ಥಿಗಳಿಗೆ ಉನ್ನತ ಶಿಣ- ಕಲ್ಪಿಸುವುದಕ್ಕಾಗಿ ಬೆಳಗಾವಿ ರಾಮತೀರ್ಥ ನಗರದಲ್ಲಿ ಪ್ರತ್ಯೇಕ ಜೈನ ಹಾಸ್ಟೆಲ್​ ಪ್ರಾರಂಭಿಸಲಾಗುವುದು ಎಂದು ಶಾಸಕ ಲಕ್ಷ$್ಮಣ ಸವದಿ ಮಾಹಿತಿ ನೀಡಿದರು.

ಪಟ್ಟಣದಲ್ಲಿ ಕಾಗವಾಡ ಮತ್ತು ಅಥಣಿ ತಾಲೂಕು ಜೈನ ಸಮುದಾಯ-ದ ವತಿಯಿಂದ ಭಾನು-ವಾ-ರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಜೈನ ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಬೇಕು. ಅವರು ಸಸ್ಯಾಹಾರಿ ಮತ್ತು ಸಾತ್ವಿಕ ಆಹಾರ ಸೇವಿಸುತ್ತಿರುವುದರಿಂದ ಅವರಿಗೆ ಜಿಲ್ಲಾಮಟ್ಟದ-ಲ್ಲೊಂದು ಪ್ರತ್ಯೇಕ ಹಾಸ್ಟೆಲ್​ ಸ್ಥಾಪಿಸಬೇಕು ಎಂದು ಅಧಿ-ವೇಶನದಲ್ಲಿ ಆಗ್ರಹಿಸಿದ್ದೆ. ಇದಕ್ಕೆ ಸಚಿವ ಜಮೀರ್​ ಅಹ್ಮದಖಾನ್​ ಸ್ಪಂದಿಸಿ, ನಿಗಮ ಮಂಡಳಿ ಸ್ಥಾಪನೆಗೆ ಸಂಬಂಧಿಸಿದಂತೆ ಶ್ರೀದಲ್ಲಿ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಪ್ರತ್ಯೇಕ ಹಾಸ್ಟೆಲ್​ ಕುರಿತು ಶ್ರೀದಲ್ಲೇ ಆದೇ-ಶ ಬರಲಿದೆ ಎಂದು ತಿಳಿಸಿದರು.

ಜೈನ ಸಮುದಾಯದ ಮುಖಂಡರಾದ ಅರುಣಕುಮಾರ ಯಲಗುದ್ರಿ, ಎಸ್​.ಬಿ.ಲಠ್ಠೆ, ಶೀತಲಗೌಡ ಪಾಟೀಲ, ಕೆ.ಎ.ವನಜೋಳ, ಅಮರ ದುರ್ಗಣ್ಣವರ, ರಾಜು ನಾಡಗೌಡ, ಅಶೋಕ ಪಡನಾಡ, ಅಭಯ ಅಕಿವಾಟೆ, ಸಂತೋಷ ಬೊಮ್ಮಣವರ, ರಾಜು ಕರ್ಪೂರಶೆಟ್ಟಿ, ಶಾಂತು ನಂದೇಶ್ವರ, ಗಜಾನನ ಯರಂಡೊಳಿ, ಸುಭಾಷ ಪಾಟೀಲ, ದುಂಡಪ್ಪ ಅಸ್ಕಿ, ಸಂಜಯ ಕುಚನೂರ, ವಿಜಯ ಅಕಿವಾಟೆ, ಮುತಣ್ಣ ಕಾತ್ರಾಳ, ದೀಪಕ ಪಾಟೀಲ, ಸಂಜಯ ಕುಸನಾಳ, ಪ್ರಕಾಶ ಚಿನಗಿ -ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net