

ಚಿತ್ರದುರ್ಗ: ಚಿತ್ರದುರ್ಗ ತಾಲೂಕಲ್ಲಿ ಸೋಮವಾರ ಬೆಳಗ್ಗೆ ಆದ ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟಿದ್ದು,17 ಜನರಿಗೆ ಗಾಯಗಳಾ ಗಿವೆ.
ಚಿತ್ರದುರ್ಗ ತಾಲೂಕು ಚಿಕ್ಕಗೊಂಡನಹಳ್ಳಿ ಎನ್.ಎಚ್.50ರಲ್ಲಿ ಬೆಳಗ್ಗೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಗ್ಗಿಗೆ ಬಿದ್ದು, ಕೊಪ್ಪಳ ತಾಲೂಕು ಹುಲಿಗಿ ಗ್ರಾಮದ ಆನಂದ ಭಟ್ಟ ಎಂಬುವರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿದ್ದ ಹುಲಿಗಿಯ ಅನಿಲ್‌ಕುಮಾರ್,ದೇವರಾಜ್‌ಪೂಜಾರ್,ಆನಂದಭಟ್ಟರು,ವೆಂಕೋಬ,ಶಿವನಗೌಡ,ಹುಲುಗಪ್ಪ ಹಾಗೂ ಕಾರಿನ ಚಾಲಕ ವಿನೋದ್‌ಕುಮಾರ್‌ರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆನಂದ್‌ಭಟ್ಟ ಅಸು ನೀಗಿದ್ದಾರೆ. ತುರುವನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮದಕರಿಪುರದ ಬಳಿ ಅಪಘಾತ
ಚಿತ್ರದುರ್ಗ ತಾಲೂಕು ಮದಕರಿಪುರ ಸೇತುವೆ ಬಳಿ(ಎನ್.ಎಚ್.48)ಲಾರಿ ಹಿಂಭಾಗಕ್ಕೆ ಟೆಂಪೋ ಟ್ರಾವೆಲರ್ ಗುದ್ದಿ ಚಿಂತಾಮಣಿ ತಾಲೂಕು ಮಣಿಗಾನಹಳ್ಳಿ ಗ್ರಾಮದ ಪ್ರಕಾಶ(45)ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಟೆಂಪೋ ಟ್ರಾವೆಲರ್‌ನಲ್ಲಿದ್ದ 11 ಪ್ರಯಾ ಣಿಕರು ಗಾಯಗೊಂಡಿದ್ದಾರೆ. ಲಾರಿ ಚಾಲಕ ಅತಿಯಾದ ವೇಗದಲ್ಲಿದ್ದ ತನ್ನ ಲಾರಿಯನ್ನು ಏಕಾಏಕಿ ನಿಲ್ಲಿಸಿದ್ದಾರಿಂದಾಗಿ ದುರ್ಘಟನೆ ನಡೆದಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.
-------