ಕೋವಿಡ್‌ ಸೋಂಕು: ಹಿರಿಯ ಪತ್ರಕರ್ತ ಬಿ.ಟಿ.ರಂಜನ್ ನಿಧನ

bt ranjan
Published on

ಪುತ್ತೂರು: ಕರೊನಾ ಸೋಂಕಿನಿಂದ ಬಳಲುತ್ತಿದ್ದ ಪುತ್ತೂರಿನ ಹಿರಿಯ ಪತ್ರಕರ್ತ ಬಿ.ಟಿ.ರಂಜನ್ ಶನಿವಾರ ಬೆಳಗ್ಗೆ ನಿಧನರಾದರು.

ಉಪ್ಪಿನಂಗಡಿ ರಥಬೀದಿ ನಿವಾಸಿ ಬಿ.ಟಿ.ರಂಜನ್, ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಹೊಸದಿಗಂತ ಪತ್ರಿಕೆಯ ಹಿರಿಯ ವರದಿಗಾರಾಗಿದ್ದರು. ಪೂತ್ತೂರು ತಾಲೂಕು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಬಿ.ಟಿ ರಂಜನ್ ಅವರಿಗೆ ಡಾ. ಶಿವರಾಮ ಕಾರಂತರ ಬಾಲವನ ರಾಜ್ಯಪ್ರಶಸ್ತಿಯೂ ಲಭಿಸಿತ್ತು.

ಅನಾರೋಗ್ಯದ ಹಿನ್ನೆಲೆ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರಂಜನ್​, ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಕೊನೆಯುಸಿರೆಳೆದರು. ಮೃತರು ಪತ್ನಿ ಗೀತಾ ಶೆಣೈ ಮತ್ತು ಪುತ್ರಿ ಸೌಮ್ಯ ಶೆಣೈ ಅವರನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net