ಹಿರಿಯ ಪತ್ರಕರ್ತ, ಚಿತ್ರನಟ ಸುರೇಶ್​ಚಂದ್ರ ನಿಧನ

sharathchandra
Published on

ಬೆಂಗಳೂರು: ಹಿರಿಯ ಪತ್ರಕರ್ತ, ಚಿತ್ರನಟ ಸುರೇಶ್​ಚಂದ್ರ ಅವರು ಶುಕ್ರವಾರ ಮಧ್ಯಾಹ್ನ ನಿಧನರಾದರು. ಇತ್ತೀಚಿಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಇಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ಮೃತರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಮಧುಗಿರಿ ತಾಲೂಕು ಲಿಂಗೇನಹಳ್ಳಿಯಲ್ಲಿ ನೆರವೇರಲಿದೆ.

80ರ ದಶಕದಿಂದ ಸಿನಿಮಾ ಪತ್ರಿಕೋದ್ಯಮದಲ್ಲಿ ಕೆಲಸ ನಿರ್ವಹಿಸಿದ್ದ ಸುರೇಶ್​ಚಂದ್ರ ಅವರು ಚಂದನವನದ ಶಂಕರ್​ನಾಗ್​, ವಿಷ್ಣುವರ್ಧನ್​, ಅಂಬರೀಶ್​, ದೇವರಾಜ್​ ಸೇರಿದಂತೆ ಹಲವು ಹಿರಿಯ ನಟರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ನಟ, ನಿರ್ದೇಶಕ ಎಸ್​.ನಾರಾಯಣ್​ ಅವರ ಆಹ್ವಾನದ ಮೇರೆಗೆ 'ಚೆಲುವಿನ ಚಿತ್ತಾರ' ಸಿನಿಮಾದಲ್ಲಿ ಪೋಷಕ ನಟರಾಗಿ ತೆರೆ ಮೇಲೆ ಕಾಣಿಸಿಕೊಂಡ ಸುರೇಶ್​ಚಂದ್ರ ಅವರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸಂಜೆವಾಣಿ ಪತ್ರಿಕೆಯಲ್ಲಿ ಸುದೀರ್ಘವಾಗಿ ಕೆಲಸ ನಿರ್ವಹಿಸಿದ್ದ ಅವರು ಕಳೆದ ವರ್ಷ ನಿವೃತ್ತಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net