ಸಂಸ್ಕಾರ ನೀಡುವ ತ್ಯಾಗಮಯಿ ತಾಯಿ: ವಾತ್ಸಲ್ಯ ಸೇವಾಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಎ.ಸಿ.ರವಿಕುಮಾರ್ ಅಭಿಮತ

5
Published on

ಮೈಸೂರು: ಹಿನಕಲ್‌ನಲ್ಲಿರುವ ಹಿರಿಯ ಜೀವಿಗಳ ಆಶ್ರಯತಾಣ ‘ವಾತ್ಸಲ್ಯ’ ಸೇವಾಕೇಂದ್ರದಲ್ಲಿ ಭಾನುವಾರ ವಿಶ್ವ ತಾಯಂದಿರ ದಿನ ಆಚರಿಸಲಾಯಿತು.

ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಎ.ಸಿ.ರವಿಕುಮಾರ್ ಮಾತನಾಡಿ, ಇಂದು ನಾವು ವಿಶ್ವ ತಾಯಂದಿರ ದಿನ ಆಚರಿಸುತ್ತಿದ್ದೇವೆ. ಇದು ಅತ್ಯಂತ ಸಂತೋಷದ ಸಂಗತಿಯಾಗಿದ್ದು, ತಾಯಿಯ ಋಣ ಎಂದಿಗೂ ತೀರಿಸಲಾಗದು ಎಂದರು.

ತಾಯಿ ನಮಗೆ ಜನ್ಮ ನೀಡುವುದರ ಜತೆಗೆ ತಾಯಿಯೇ ಮೊದಲ ಗುರುವಾಗಿ ಸಂಸ್ಕಾರ ನೀಡಿ ತ್ಯಾಗಮಯಿಯಾಗಿ ಬದುಕಲು ಪ್ರೇರೇಪಣೆ ನೀಡುತ್ತಾಳೆ. ಅಂತಹ ಮಾತೆಯನ್ನು ನಾವು ಪ್ರತಿದಿನವೂ ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ತಿಳಿಸಿದರು.

ಆಶ್ರಮದ ಗೌರವ ಕಾರ್ಯದರ್ಶಿ ನಾಗರತ್ನಾ ಮಾತನಾಡಿ, 9 ತಿಂಗಳು ಹೊತ್ತು ಹೆತ್ತು ಸಾಕಿ ಸಲಹಿ ಮಕ್ಕಳನ್ನು ಬೆಳೆಸುವ ತಾಯಿ ದೇವರು. ಅಂತಹ ಮಾತೆಯನ್ನು ಮುಂದಿನ ದಿನಗಳಲ್ಲಿ ಮಕ್ಕಳು ಚನ್ನಾಗಿ ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಬೇಕು. ತಾಯಿಯ ವಾತ್ಸಲ್ಯ ಮಮತೆಗೆ ಬೆಲೆ ಕಟ್ಟಲಾಗದು. ಅಂತಹ ಜನ್ಮದಾತೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ. ಒತ್ತಡದ ಬದುಕಿನಲ್ಲಿ ಮನೆಯ ಹಿರಿಯ ಜೀವಿಗಳನ್ನು ಗೌರವಕೊಟ್ಟು ನಡೆಸಿಕೊಳ್ಳುವುದು ಪ್ರಸ್ತುತ ದಿನಗಳಲ್ಲಿ ಪ್ರಮುಖವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಜೀವಿಗಳಿಗೆ ಸಿಹಿ ವಿತರಿಸಿ ಗೌರವ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net