ಅಭ್ಯುದಯ ಶಾಲೆಯಲ್ಲಿ ಕಲೋತ್ಸವಕ್ಕೆ ಜನಸಾಗರ

25 mbl kalotsava
9 ಸ್ಟಾಲ್‌ಗಳಲ್ಲಿ 700ಕ್ಕೂ ಹೆಚ್ಚು ಮಾದರಿ ಪ್ರದರ್ಶನ, ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಅಗತ್ಯ, ಮುದ್ದೇಬಿಹಾಳ, More than 700 models on display in 9 stalls, a suitable platform is needed to showcase talent, Muddebihala,
Published on

ಮುದ್ದೇಬಿಹಾಳ:  ಪಟ್ಟಣದ ವಿದ್ಯಾನಗರ ಹಿಂಭಾಗ ಹೋಳ್ಕರ್ ಕಾಲನಿಯಲ್ಲಿನ ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಕಲೋತ್ಸವದಲ್ಲಿ ಅಭ್ಯುದಯ ಇಂಟರ್‌ನ್ಯಾಷನಲ್ ಸ್ಕೂಲ್‌ನ ಇಂಗ್ಲಿಷ್ ಮಾಧ್ಯಮದ ಮಕ್ಕಳು ವಿವಿಧ ವಿಷಯಗಳ ಮೇಲೆ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿ ಗಮನಸೆಳೆದರು.

ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ತಾಲೂಕು ಕುರುಬರ ಸಂಘದ ಅಧ್ಯಕ್ಷ, ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಎಂ.ಎನ್. ಮದರಿ, ಮಕ್ಕಳಲ್ಲಿ ಹುದುಗಿದ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಅಗತ್ಯವಿದೆ. ನಮ್ಮ ಸಂಸ್ಥೆಯಿಂದ ಮಕ್ಕಳಿಗೆ ವೇದಿಕೆ ಕಲ್ಪಿಸಿಕೊಡುವ ಕೆಲಸ ಯಶಸ್ವಿಯಾಗಿ ಮಾಡಿದ್ದೇವೆ. ವಿದ್ಯಾರ್ಥಿಗಳು ಸಾಕಷ್ಟು ಮಾದರಿಗಳನ್ನು ತಯಾರಿಸಿ ಅವುಗಳನ್ನು ಪ್ರೇಕ್ಷಕರಿಗೆ ಇಂಗ್ಲಿಷಿನಲ್ಲೇ ವಿವರಿಸುವ ಮೂಲಕ ತಮ್ಮ ಪಾಂಡಿತ್ಯ ಮೆರೆದಿರುವುದು ಶ್ಲಾಘನೀಯ. ಮಕ್ಕಳಿಗೆ ಮಾರ್ಗದರ್ಶನ ನೀಡಿದ ನಮ್ಮ ಶಾಲೆಗಳ ಶಿಕ್ಷಕರ ಕಾರ್ಯ ಮೆಚ್ಚುವಂಥದ್ದು ಎಂದರು.

ಎಲ್‌ಕೆಜಿ, ಯುಕೆಜಿ, 1-10ನೇ ತರಗತಿಯ 700ಕ್ಕೂ ಹೆಚ್ಚು ಮಕ್ಕಳು 9 ಸ್ಟಾಲ್‌ಗಳಲ್ಲಿ ತಮ್ಮ ಮಾದರಿಗಳನ್ನು ಪ್ರದರ್ಶಿಸಿದರು. ಮಕ್ಕಳ ಪಾಲಕರು ಮಾತ್ರವಲ್ಲದೆ ಸಾರ್ವಜನಿಕರೂ ಕುತೂಹಲದಿಂದ ಆಗಮಿಸಿ ಮಕ್ಕಳ ಪ್ರತಿಭೆ ಕೊಂಡಾಡಿದರು. ಗಣಿತದಲ್ಲಿ 39, ಸಮಾಜ ವಿಜ್ಞಾನದಲ್ಲಿ 20, ವಿಜ್ಞಾನದಲ್ಲಿ 48, ಇಂಗ್ಲಿಷಿನಲ್ಲಿ 25, ಕನ್ನಡದಲ್ಲಿ 45, ಹಿಂದಿಯಲ್ಲಿ 14, ಎಲ್‌ಕೆಜಿ ವಿಭಾಗದಲ್ಲಿ 12, ಯುಕೆಜಿ ವಿಭಾಗದಲ್ಲಿ 15 ಮಾದರಿಗಳನ್ನು ಪ್ರದರ್ಶಿಸಲಾಯಿತು.

ಕಲೋತ್ಸವದಲ್ಲಿನ ವಸ್ತು ಪ್ರದರ್ಶನ ನೋಡಲು ಜನಸಾಗರವೇ ಹರಿದು ಬಂದಿತ್ತು.

ಶಿಕ್ಷಕರಾದ ತೇಜಶ್ವಿನಿ ಪತ್ತಾರ, ಸುಮಾ ಬಿದರಕುಂದಿ, ಎಚ್.ಎಲ್. ಬಾಗವಾನ, ಕವಿತಾ ರಾಠೋಡ, ಯಾಸಿನ್ ಬಾಗವಾನ, ಎಚ್.ಎಚ್. ಮೂಲಿಮನಿ, ಬಿ.ಎಚ್. ಜಾವಡಗಿ, ಸವಿತಾ ಪಲ್ಲೇದ, ನೇತ್ರಾ ಪಲ್ಲೇದ, ನೀಲಾ ಮನಗೂಳಿ, ಮುರ‌್ರೆ, ಜ್ಯೋತಿ ಸಜ್ಜನ, ಪಿ.ಎಸ್. ಕಲ್ಯಾಣಮಠ, ಪ್ರಿಯಾ ಹುರಕಡ್ಲಿ, ಪರಮ್ಮ ಗಣಾಚಾರಿ, ಸಾಗರ ಜಾಧವ, ರಾಜೇಶ, ಸುಚಿತ್ರಾ ಹಿಪ್ಪರಗಿ, ಎ.ಬಿ. ಬಳಬಟ್ಟಿ, ಸುನೀಲ ಚನ್ನಾಪುರ ಮಾರ್ಗದರ್ಶಕರಾಗಿ ಆಯಾ ಸ್ಟಾಲ್‌ಗಳ ಉಸ್ತುವಾರಿ ನೋಡಿಕೊಂಡರು.

ಸಂಸ್ಥೆ ನಿರ್ದೇಶಕ ಕಿರಣ್ ಮದರಿ, ದಿ ಕರ್ನಾಟಕ ಕೋ ಆಪ್ ಬ್ಯಾಂಕ್ ಮಾಜಿ ನಿರ್ದೇಶಕಿ ಶ್ರೀದೇವಿ ಮದರಿ, ಆಡಳಿತಾಧಿಕಾರಿ ಬಿ.ಜಿ. ಬಿರಾದಾರ, ನಿವೃತ್ತ ತೆರಿಗೆ ಅಧಿಕಾರಿ ಬಸವರಾಜ ಬಿಜ್ಜೂರ, ಅಭ್ಯುದಯ ಸೈನ್ಸ್ ಪಿಯು ಕಾಲೇಜಿನ ಪ್ರಾಂಶುಪಾಲರು, ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆಗಳ ಮುಖ್ಯಾಧ್ಯಾಪಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net