ಉತ್ತಮ ಜೀವನಕ್ಕೆ ವೈಜ್ಞಾನಿಕ ಮನೋಭಾವ ಅವಶ್ಯ

vijnana
ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಪ್ರೊ.ನಿತ್ಯಾನಂದ ಮಾತನಾಡಿದರು. ಮಂಜುನಾಥ ಎ.ವಿ, ಪ್ರತಿಮಾ ಭಟ್ ಇದ್ದರು.
Published on

ಪಡುಬಿದ್ರಿ: ಶುಚಿತ್ವ ಆರೋಗ್ಯಯುತ ಆಹಾರ, ವೈಜ್ಞಾನಿಕ ಮನೋಭಾವ ಅವಶ್ಯ ಎಂದು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಪ್ರತಿನಿಧಿ ಪ್ರೊ.ನಿತ್ಯಾನಂದ ಹೇಳಿದರು.

ಅದಮಾರು ಪೂರ್ಣಪ್ರಜ್ಞ ಕನ್ನಡ ಮಾಧ್ಯಮ ಪ್ರೌಢಶಾಲೆ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ ಆಶ್ರಯದಲ್ಲಿ ಶುಕ್ರವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಕಿ ಪ್ರತಿಮಾ ಭಟ್‌ಮಾತನಾಡಿ, ನಮ್ಮ ನಿತ್ಯ ಜೀವನದ ಪ್ರತಿ ಹಂತದಲ್ಲೂ ವಿಜ್ಞಾನವಿರುತ್ತದೆ. ಅದನ್ನು ಗುರುತಿಸಿದರೆ ಮಾತ್ರ ನಮಗೆ ಅನುಭವವಾಗುತ್ತದೆ. ಸೂಕ್ತ ವಿಜ್ಞಾನ ಕ್ರಮ ಜೀವನದಲ್ಲಿ ಅಳವಡಿಸಬೇಕು ಎಂದರು.

ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯ ಶಿಕ್ಷಕ ಮಂಜುನಾಥ ಎ.ವಿ ಅವರು ವಿಜ್ಞಾನದ ಮಹತ್ವ ಹಾಗೂ ಜೀವನದಲ್ಲಿ ವಿಜ್ಞಾನದ ಅವಶ್ಯಕತೆ ಕುರಿತು ಮಾಹಿತಿ ನೀಡಿದರು. ಬಳಿಕ ಭಾರತೀಯ ಪ್ರಾಚೀನ ವಿಜ್ಞಾನ, ಸಿವಿ ರಾಮನ್ ಮತ್ತು ಅಬ್ದುಲ್ ಕಾಲಂ ಅವರ ಜೀವನದ ಕುರಿತಾದ ಸಾಕ್ಷೃಚಿತ್ರ ಪ್ರದರ್ಶನ ನಡೆಯಿತು. ತನ್ವಿ ಸ್ವಾಗತಿಸಿದರು. ಶ್ರೀನಿಕಾ ವಂದಿಸಿದರು. ಪ್ರಥಮ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net