ಸದ್ಭಾವ ಮೂಡಿಸುವ ಸತ್ಸಂಗ

A satsang that creates goodwill
ವಿಜಯಪುರದ ವರದಾಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಮಹಾದೇವಪ್ಪ ದೇವರ ಉಪನ್ಯಾಸ ನೀಡಿದರು. ಸಿದ್ದು ಜೋಗೂರ, ಬಿ.ವಿ. ಪಾಟೀಲ ಇದ್ದಾರೆ.
Published on

ವಿಜಯಪುರ : ಸತ್ಸಂಗ ಕಾರ್ಯಕ್ರಮಗಳು ಸದ್ಭಾವ ಅರಳಲು ಸಹಾಯ ಮಾಡುತ್ತವೆ ಎಂದು ಸ್ಪಂದನಾ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷ ಮಹಾದೇವಪ್ಪ ದೇವರ ಹೇಳಿದರು.

ನಗರದ ಆಶ್ರಮ ರಸ್ತೆಯ ಐಶ್ವರ್ಯ ಬಡಾವಣೆಯಲ್ಲಿನ ವರದಾಂಜನೇಯ ದೇವಸ್ಥಾನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 543ನೇ ಸತ್ಸಂಗ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಯುವಜನತೆ ಡಿಜಿಟಲ್​ ಮಾಧ್ಯಮಗಳ ದಾಸರಾಗಿ ತಮ್ಮ ಗುರು ಮತ್ತು ಗುರಿಯನ್ನು ಮರೆಯುತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳ ಮೇಲೆ ಗಮನಹರಿಸಿ ಅವರನ್ನು ಸರಿದಾರಿಗೆ ತರುವುದು ಅವಶ್ಯಕವಾಗಿದೆ ಎಂದು ಸಲಹೆ ನೀಡಿದರು.

ಸತ್ಸಂಗ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕಾಗಿದೆ. ಅದರಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ಸಕಾರಾತ್ಮಕವಾಗಿ ಚಿಂತನೆ ಮಾಡುತ್ತದೆ. ಇದು ವ್ಯಕ್ತಿಯೊಬ್ಬ ಒಳ್ಳೆಯ ಪ್ರಜೆಯಾಗಿ ಬೆಳೆಯಲು ಮಾರ್ಗದರ್ಶನ ನೀಡುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಮುಖ್ಯೋಪಾಧ್ಯಾಯ ಬಿ.ವಿ. ಪಾಟೀಲ ಮಾತನಾಡಿ, ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯನ ಮನದಲ್ಲಿ ಶಾಂತಿ ತುಂಬಲು ಸತ್ಸಂಗಗಳು ಸಹಾಯವಾಗುತ್ತವೆ. ಅದರಿಂದ ಸಮಾಧಾನ ಸೌಹಾರ್ದ ಮೂಡಲು ಸಾಧ್ಯವಿದೆ ಎಂದರು.

ಉದ್ಯಮಿ ಸಿದ್ದು ಜೋಗೂರ ವೇದಿಕೆಯಲ್ಲಿದ್ದರು. ಸುನಿತಾ ಬಿರಾದಾರ ಪ್ರಾರ್ಥಿಸಿದರು. ಎಸ್​.ವಿ. ಬುರ್ಲಿ ಸ್ವಾಗತಿಸಿದರು. ಎಂ.ಒ. ಶಿರೂರ ನಿರೂಪಿಸಿದರು. ಸಾಹಿತಿ ಮಲ್ಲಿಕಾರ್ಜುನ ಮೇತ್ರಿ ವಂದಿಸಿದರು.

ಮಾರುತಿ ದೇವಸ್ಥಾನದ ಅಧ್ಯಕ್ಷ ಬಿ.ಎನ್​. ಬಿರಾದಾರ, ಕೋಶಾಧ್ಯಕ್ಷ ಎಸ್​.ಕೆ. ಬಿರಾದಾರ, ಡಾ. ಆರ್​.ಎನ್​. ದಿಂಡೂರ, ಈರಣ್ಣ ಹುಲಸೂರ, ಚಂದ್ರಶೇಖರ ಸರಸಂಬಿ, ಅಶೋಕ ಬಿರಾದಾರ, ಮಲ್ಲಯ್ಯಸ್ವಾಮಿ ಹಿರೇಮಠ, ಎಂ.ಕೆ. ಬಿಸನಾಳ ಎಂ.ಆರ್​. ಬಡಿಗೇರ, ನಾನಾಗೌಡ ಪಾಟೀಲ, ಲಕ್ಷ$್ಮಣ ಮೇತ್ರಿ, ಶ್ರೀಶೈಲ ಬೆಲ್ಲದ, ಬಸವರಾಜ ಕಣಬೂರ, ಅಶೋಕ ದೇಶಟ್ಟಿ, ಪಾಯಣ್ಣ ಪಡಸಲಗಿ, ಅಶೋಕ ಬನಹಟ್ಟಿ, ಎಸ್​.ಜಿ. ಸಾರವಾಡ, ಅಮರನಾಥ ಬಿರಾದಾರ, ಜಿ.ಡಿ. ಬಾಗೇವಾಡಿ, ಹರ್ಷ ಬರಟಗಿ, ಪಂಚಾಕ್ಷರಿ ದಿಂಡೂರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net