ಇವತ್ತಿನ ಚೀಪ್ ಪಾಲಿಟಿಕ್ಸ್​ನಲ್ಲಿ ಸಿಕ್ಕಾಕೊಂಡಿದ್ದೀನಿ... ಎಂದು ಕಣ್ಣೀರಿಟ್ಟ ಸಂತೋಷ್​ ಲಾಡ್!

ವೇದಿಕೆಯಲ್ಲೇ ಕಣ್ಣೀರಿಟ್ಟ ಸಂತೋಷ್​ ಲಾಡ್! - youtube
Published on

ಹುಬ್ಬಳ್ಳಿ: ಫುಡ್ ಕಿಟ್ ಕೊಟ್ಟು ಫೋಟೋ ತೆಗೆಸಿಕೊಳ್ಳೋದು ನನಗೆ ನಾಚಿಕೆ ಆಗ್ತಿದೆ. ಆದ್ರೆ ಇವತ್ತಿನ ಚೀಪ್ ಪಾಲಿಟಿಕ್ಸ್​ನಲ್ಲಿ ಸಿಕ್ಕಾಕೊಂಡಿದ್ದೀನಿ. ಇದು ಇಂದಿನ ರಾಜಕೀಯ ಅನಿವಾರ್ಯತೆಗೆ ಹಿಡಿದ ಕನ್ನಡಿ... ಎನ್ನತ್ತಲೇ ಮಾಜಿ ಸಚಿವ ಸಂತೋಷ್ ಲಾಡ್ ಕಣ್ಣೀರಿಟ್ಟರು.

ಕಲಘಟಗಿ ತಾಲೂಕಿನ ಕೂಡಲ್ಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಡವರಿಗೆ ಆಹಾರ ಕಿಟ್ ವಿತರಣಾ ಸಮಾರಂಭದಲ್ಲಿ ಮಾತನಾಡುತ್ತಾ ಭಾವುಕರಾದ ಸಂತೋಷ್​ ಲಾಡ್​, ಆಹಾರದ ಕಿಟ್ಟು ಬಡವರ ಜತೆ ಫೋಟೋ ತೆಗೆಸಿಕೊಳ್ಳಲು ನನಗೆ ಬೇಸರ ಆಗುತ್ತೆ. ಇಂತಹ ಸಂಕಷ್ಟದಲ್ಲೂ ಪ್ರಚಾರ ಪಡೆಯಬಾರದು. ಇದನ್ನು ಆತ್ಮಸಾಕ್ಷಿ ಒಪ್ಪಲ್ಲ, ಆ ದೇವರು ಕೂಡ ಮೆಚ್ಚಲ್ಲ, ಫುಡ್ ಕಿಟ್ ಕೊಟ್ಟು ಫೋಟೋ ತೆಗೆಸಿಕೊಳ್ಳೋದು ನನಗೆ ನಾಚಿಕೆ ಆಗ್ತಿದೆ ಎಂದು ಕಣ್ಣೀರಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net