

ಮೈಸೂರು: ಗೋಕುಲಂ ಬಿ.ಸಿ. ಲಿಂಗಯ್ಯ ಉದ್ಯಾನದಲ್ಲಿ ಬೆಳೆದಿದ್ದ ಗಂಧದ ಮರವನ್ನು ಕಳ್ಳತನ ಮಾಡಲಾಗಿದೆ.
ಸಂಪೂರ್ಣವಾಗಿ ಬೆಳೆದಿರುವ ಗಂಧದ ಮರದ ಬುಡ ಹಾಗೂ ರೆಂಬೆಯನ್ನು ಕತ್ತರಿಸಿ ಮಧ್ಯದ ಕಾಂಡ ಭಾಗವನ್ನು ಕಳ್ಳರು ಅಪಹರಿಸಿದ್ದಾರೆ. ವಾಯುವಿಹಾರಿಗಳು ಭಾನುವಾರ ಬೆಳಗ್ಗೆ ಮರ ಕತ್ತರಿಸಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ವಿವಿ ಪುರಂ ಠಾಣೆಯ ಪೊಲೀಸರು ಭೇಟಿ ನೀಡಿ, ಅರಣ್ಯ ಇಲಾಖೆಯ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.