ಮೂಢನಂಬಿಕೆ ದೂರ ಮಾಡಿದ ಸಂತ

eid milad
Published on

ನರಗುಂದ: ಪಟ್ಟಣ ಸೇರಿ ತಾಲೂಕಿನಾದ್ಯಂತ ಈದ್ ಮಿಲಾದ್ ಅನ್ನು ಗುರುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಪಟ್ಟಣದ ಶಿವಾಜಿ ವರ್ತುಲದಲ್ಲಿ ಜೈ ಭೀಮ್ ಆಟೋ ಚಾಲಕರ ಹಾಗೂ ಮಾಲೀಕರ ಸಂಘದಿಂದ ಶರಬತ್ ವಿತರಿಸಲಾಯಿತು. ವಕೀಲ ಚಂದ್ರಗೌಡ ಪಾಟೀಲ ಮಾತನಾಡಿ, ‘ಹಜರತ್ ಮಹಮ್ಮದ್ ಪೈಗಂಬರರು ಕಂದಾಚಾರ, ಮೂಢ ನಂಬಿಕೆಗಳನ್ನು ದೂರಗೊಳಿಸಿದ ಮಹಾನ್ ಸಂತರಾಗಿದ್ದರು’ ಎಂದರು.

ಪಟ್ಟಣದಲ್ಲಿ ಪೈಗಂಬರರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಮದರಸಾ ಮಕ್ಕಳಿಂದ ಪಟ್ಟಣದ ವಿವಿಧೆಡೆ ಕುರಾನ್ ಪಠಣ, ವಿವಿಧ ಧಾರ್ಮಿಕ ಆಚರಣೆಗಳು ಜರುಗಿದವು.

ಜೈಭೀಮ್ ಅಟೋ ಚಾಲಕರ ಸಂಘದ ಅಧ್ಯಕ್ಷ ದಾವಲಸಾಬ ಗಸ್ತಿ, ಉಪಾಧ್ಯಕ್ಷ ಮಹಾದೇವ ಆಸೇದಾರ, ಕಾರ್ಯದರ್ಶಿ ಚನ್ನಬಸು ಹೊಸರಣ್ಣವರ, ಕರವೇ ನರಗುಂದ ತಾಲೂಕು ಅಧ್ಯಕ್ಷ ನಭಿಸಾಬ ಕಿಲ್ಲೇದಾರ, ಫಕ್ರುಸಾಬ ರೇವಡಿಗಾರ, ಇಮಾಮ್ ಹದ್ಲಿ, ಸಾಹೀಬಲಾಲ್ ಶೇಖ, ಕಾಶೀನಾಥ ರಂಗಣ್ಣವರ, ಸದ್ದಾಂ ಕಿಚಡಿ, ನಜೀರಸಾಬ ಹಜರತನವರ, ಅಂದಾನಯ್ಯ ಹಿರೇಮಠ, ಸಲೀಂ ಕರಮನಿ, ಸಮೀರ್ ಬೊಲೇಖಾನ್, ನಜೀರ್ ಅತ್ತಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net