ರೋಹಿಣಿ ಸಿಂಧೂರಿಯನ್ನ ಆಂಧ್ರಕ್ಕೆ ಕಳಿಸಿ, ಮಕ್ಕಳನ್ನು ಆಟವಾಡಿಸುತ್ತಾ ಅಡುಗೆ ಮಾಡಿಕೊಂಡಿರಲಿ: ಸಾರಾ ಮಹೇಶ್​

1118717
Published on

ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾ.ರಾ.ಮಹೇಶ್ ನಡುವಿನ ಜಟಾಪಟಿ ತಾರಕಕ್ಕೇರಿದ್ದು, ಸಿಂಧೂರಿ ವಿರುದ್ಧ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಶಾಸಕ ಏಕಾಂಗಿಯಾಗಿ ಗುರುವಾರ ಪ್ರತಿಭಟನೆಗೆ ಕುಳಿತ್ತಿದ್ದಾರೆ.

ನನ್ನ ಒಡೆತನದಲ್ಲಿರುವ ಸಾ‌.ರಾ. ಚೌಲ್ಟ್ರಿ ರಾಜಕಾಲುವೆ ಮೇಲೆ ನಿರ್ಮಾಣ ಆಗಿಲ್ಲ. ಉನ್ನತ ಮಟ್ಟದ ಅಧಿಕಾರಿಗಳು ಜಾಗದ ಸರ್ವೇ ಮಾಡಲಿ‌. ರಾಜಕಾಲುವೆ ಮೇಲೆ ನಿರ್ಮಾಣ ಆಗಿದ್ದರೆ ಅದನ್ನು ಸಾರ್ವಜನಿಕರ ಬಳಕೆಗಾಗಿ ರಾಜ್ಯಪಾಲರಿಗೆ ಹಸ್ತಾಂತರ ಮಾಡುತ್ತೇನೆ. ಮಾತ್ರವಲ್ಲ, ನಾನು ಸಾರ್ವಜನಿಕ ಜೀವನದಿಂದಲೇ ನಿವೃತ್ತಿ ಹೊಂದುತ್ತೇನೆ.‌ ಒಂದು ವೇಳೆ ರೋಹಿಣಿ ಸಿಂಧೂರಿ ಮಾಡಿರುವ ಆರೋಪ ಸುಳ್ಳಾದರೆ ಐಎಎಸ್ ಹುದ್ದೆಯಿಂದಲೇ ಅವರನ್ನು ಅಮಾನತು ಮಾಡಬೇಕು. ಮಕ್ಕಳನ್ನು ಆಡಿಸಿಕೊಂಡು, ಅಡುಗೆ ಮಾಡಿಕೊಂಡಿರಲು ಆಂಧ್ರಕ್ಕೆ ಕಳುಹಿಸಬೇಕು ಎಂದು ಸವಾಲು ಹಾಕುತ್ತಾ ಏಕಾಂಗಿ ಪ್ರತಿಭಟನೆ ಶುರು ಮಾಡಿದ್ದೇನೆ ಎಂದು ಸಾ.ರಾ.ಮಹೇಶ್ ಹೇಳಿದರು. ಇದನ್ನೂ ಓದಿರಿ ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ

ಸಾರಾ ಮಹೇಶ್​ ವಿರುದ್ಧ ನಿನ್ನೆ ರೋಹಿಣಿ ಸಿಂಧೂರಿ ದಾಖಲೆ ಬಿಡುಗಡೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಇಂದು ಸಾ.ರಾ.ಮಹೇಶ್ ಕೂಡ ದಾಖಲೆ ಬಿಡುಗಡೆ ಮಾಡಿದ್ದಾರೆ. ಕಡತಗಳ ಮೂಲಕವೇ ಏಟು- ಎದಿರೇಟಿಗೆ ಅಧಿಕಾರಿ- ಶಾಸಕ ನಿಂತಿದ್ದಾರೆ. ಲಿಂಗಾಂಬುದಿ ಕೆರೆ ಜಾಗದ ನಕ್ಷೆ, ಮಹಾನಗರ ಪಾಲಿಕೆ ಆಯುಕ್ತರ ಆದೇಶದ ಪತಿ ಬಿಡುಗಡೆ ಮಾಡಿದ ಮಹೇಶ್​, ಲಿಂಗಾಂಬುದಿ ಕೆರೆಯಿಂದ 30 ಮೀಟರ್ ಅಂತರ ಕಾಯ್ದುಕೊಳ್ಳಲಾಗಿದೆ. ಬಫರ್ ಝೋನ್ ಒತ್ತುವರಿಯಾಗಿದೆ ಎಂಬುದು ಸುಳ್ಳು ಎಂದು ಸಮರ್ಥಿಸಿಕೊಂಡರು.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾದೇಶಿಕ ಅಯುಕ್ತ ಜಿ.ಸಿ. ಪ್ರಕಾಶ್, ರೋಹಿಣಿ ಸಿಂಧೂರಿ ಬಿಡುಗಡೆ ಮಾಡಿದ ದಾಖಲೆಯಲ್ಲಿ ಸತ್ಯವಿದೆಯೇ ಎಂದು ಪರಿಶೀಲಿಸುವೆ. ಈಗಾಗಲೇ ಅಪರ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಎಲ್ಲ ಕಂದಾಯ ದಾಖಲೆಗಳನ್ನೂ ಪರಿಶೀಲಿಸಿ‌ ರಾಜಕಾಲುವೆ ಒತ್ತವರಿಯಾಗಿದೆಯೇ ಎಂದು ವರದಿ ನೀಡಲು ಸೂಚಿಸಿರುವೆ. ನಾನೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಇನ್ನು ಮೂರು ದಿನದಲ್ಲಿ ಸಮಿತಿಯಿಂದ ವರದಿ ಪಡೆದ ಬಳಿಕ‌ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net