

ವಿಜಯಪುರ: ಉನ್ನತ ಶಿಕ್ಷಣ ಹಂತದಲ್ಲಿ "ಭಾರತೀಯ ಭಾಷೆಗಳಲ್ಲಿ ಸಂವಾದದ ಸಂಸತಿ & ಸಮಕಾಲೀನ ಜಿಜ್ಞಾಸೆ ಮತ್ತು ಪ್ರಯತ್ನಗಳು' ಎಂಬ ವಿಷಯ ಕುರಿತು ಒಂದು ದಿನದ ವಿಚಾರಣಾ ಸಂಕಿರಣ ಹಾಗೂ ಕಾರ್ಯಗಾರ ಸೆ. 13 ರಂದು ನಗರದ ಎ.ಎಸ್. ಪಾಟೀಲ ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿದೆ.
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎಜ್ಯುಕೇಶನ್ ಮತ್ತು ಬೆಂಗಳೂರಿನ ಅಜೀಂ ಪ್ರೇಮಜಿ ವಿಶ್ವವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10.30 ಕ್ಕೆ ಆಂಧ್ರಪ್ರದೇಶದ ವಿಜಯನಗರದ ಕೇಂದ್ರಿಯ ಬುಡಕಟ್ಟು ವಿವಿಯ ಉಪಕುಲಪತಿ ಪ್ರೊ. ಡಿ.ವಿ. ಕಟ್ಟಿಮನಿ ಕಾರ್ಯಕ್ರಮ ಉದ್ಘಾಟಿಸುವರು. ರಾಣಿ ಚನ್ನಮ್ಮ ವಿವಿಯ ಕೆಎಎಸ್ ಸಂತೋಷ ಕಾಮಗೌಡ ಅಧ್ಯಕ್ಷತೆ ವಹಿಸುವರು.
ಬೆಳಗ್ಗೆ 11.30 ಕ್ಕೆ ಪ್ರಾದೇಶಿಕ ಭಾಷೆಗಳಲ್ಲಿನ ಶೈಕ್ಷಣಿಕ ಸಂಪನ್ಮೂಲಗಳ ಮೂಲಕ ಪರಿಕಲ್ಪನಾತ್ಮಕ ಗ್ರಹಿಕೆಯ ಸಂವರ್ಧನೆ ಎಂಬ ವಿಷಯದ ಕುರಿತ ವಿಚಾರಗೋಷ್ಠಿ ನಡೆಯಲಿದ್ದು, ಹೈದರಾಬಾದ್ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ ಭಾಷಾಶಾಸ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಆರ್. ಅಮೃತವಲ್ಲಿ, ತೀರ್ಥಹಳ್ಳಿಯ ತುಂಗಾ ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಪೊ. ಗಣೇಶ ಯು.ಎಚ್., ಬೆಂಗಳೂರಿನ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಟ್ಸ್ ಅಂಡ್ ಸೈನ್ಸ್ನ ಬೋಧಕ ಶ್ರೀಕಂಠ ದಾನಿ ಭಾಗವಹಿಸುವರು.
ಮಧ್ಯಾಹ್ನ 12.30 ರಿಂದ 1.30 ರವರೆಗೆ ಅನುವಾದ ಸಂಪದದ ಶೋಧನೆ ಮತ್ತು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಪ್ರಕಟನೆಗಳಿಗೆ ಚಂದಾದಾರರಾಗುವಿಕೆ ಒಂದನೇ ಅಧಿವೇಶನ ನಡೆಯಲಿದ್ದು, ಮಧ್ಯಾಹ್ನ 2.30 ರಿಂದ ಸಂಜೆ 4.30 ರವರೆಗೆ ಅನುವಾದ ಸಂಪದದಲ್ಲಿ ಲಭ್ಯವಿರುವ ಸಾಮಗ್ರಿಗಳು ಮತ್ತು ಹೆಚ್ಚುವರಿ ಸಂಪನ್ಮೂಲಗಳ ರಚನೆ ಮತ್ತು ಸಂಚಯ ಎರಡನೇ ಅಧಿವೇಶನ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.