ಅಸುರಕ್ಷಿತ ಆಹಾರ ನಿಷೇಧಕ್ಕೆ ಎ.ಎಸ್.ಪೊನ್ನಣ್ಣ ಸೂಚನೆ

a.s.ponnanna
Published on

ಮಡಿಕೇರಿ: ಅಸುರಕ್ಷಿತವಾದ ಆಹಾರ ಪದಾರ್ಥಗಳನ್ನು ನಿಷೇಧಿಸಲು ಹಾಗೂ ಮಾರಟ ಮಾಡದಂತೆ ತಡೆಯಲು ಅಂಕಿತ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಸೂಚಿಸಿದರು.

ಸಾರ್ವಜನಿಕರ ದೂರು ಮತ್ತು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳ ಆಧಾರದಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಕೊಡಗು ಜಿಲ್ಲೆಯ ಅಧಿಕಾರಿಗಳೊಂದಿಗೆ ವಿಧಾನ ಸೌಧ ಕಚೇರಿಯಲ್ಲಿ ಮಂಗಳವಾರ ತುರ್ತುಸಭೆ ನಡೆಸಿ ಸೂಚಿಸಿದರು.

ಕೊಡಗು ಜಿಲ್ಲೆ ಹಾಗೂ ಕೇರಳ ಜಿಲ್ಲೆ ಗಡಿಭಾಗವಾದ ಕುಟ್ಟ, ಮಾಕುಟ್ಟ ಮತ್ತು ಪೆರುಂಬಾಡಿ ವ್ಯಾಪ್ತಿಯಲ್ಲಿ ಕೇರಳದ ಆಹಾರ ಪದಾರ್ಥಗಳು ಸರಬರಾಜುವಾಗುತ್ತಿದೆ. ಆಹಾರ ಪದಾರ್ಥಗಳಲ್ಲಿ ತಯಾರಿಕಾ ದಿನಾಂಕ ಹಾಗೂ ತಯಾರಿಕೆ ಮಾಡುವವರ ವಿವರ ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಕೃತಕ ಬಣ್ಣಗಳನ್ನು ಸೇರಿಸಿರುವುದರ ಬಗ್ಗೆ ೯೦ ಆಹಾರ ಪದಾರ್ಥಗಳನ್ನು ವಿಶ್ಲೇಷಣಿಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪ್ರಯೋಗಾಲದ ವರದಿಗಳಲ್ಲಿ ೩೧ ಆಹಾರ ಮಾದರಿಗಳು ಅಸುರಕ್ಷಿತವೆಂದು, ೪ ಆಹಾರ ಮಾದರಿಯಲ್ಲಿ ಕಡಿಮೆ ಗುಣಮಟ್ಟವಿದೆ ಎಂದು ದೃಢವಾಗಿರುತ್ತದೆ ಎಂದು ಅಂಕಿತ ಅಧಿಕಾರಿಗಳು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ರವರಿಗೆ ವಿವರಿಸಿದರು.

ಇದು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಕೂಡಲೇ ಅಸುರಕ್ಷಿತವಾದ ಆಹಾರ ಪದಾರ್ಥಗಳನ್ನು ನಿಷೇಧಿಸಿ ಹಾಗೂ ಅಂತಹ ಆಹಾರ ಪದಾರ್ಥಗಳನ್ನು ಮಾರಟ ಮಾಡದಂತೆ ತಡೆಯಲು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಕೊಡಗು ಜಿಲ್ಲೆಯ ಅಂಕಿತಾಧಿಕಾರಿ ಡಾ.ಅನಿಲ್ ದಾವನ್, ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net