ಹೆಲ್ಮೆಟ್ ಧರಿಸಿದವರಿಗೆ ಗುಲಾಬಿ ನೀಡಿ ಅಭಿನಂದನೆ

13 RON-1
. ರೋಣ ಪಟ್ಟಣದಲ್ಲಿ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಿದ ಸವಾರರಿಗೆ ಪಿಎಸ್‌ಐ ಜೂಲಕಟ್ಟಿ ಗುಲಾಬಿ ಹೂವು ನೀಡಿ ಅಭಿನಂದಿಸಿದರು.
Published on

ರೋಣ: ಪಟ್ಟಣದಲ್ಲಿ ಹೆಲ್ಮೆಟ್ ಧರಿಸಿ ಬೈಕ್ ಚಾಲನೆ ಮಾಡಿದ ಹಾಗೂ ಸೀಟ್ ಬೆಲ್ಟ್ ಹಾಕಿಕೊಂಡು ಕಾರಿನಲ್ಲಿ ಪ್ರಯಾಣಿಸಿದವರಿಗೆ ಪಿಎಸ್‌ಐ ಎಲ್.ಕೆ. ಜೂಲಕಟ್ಟಿ ಇತ್ತೀಚೆಗೆ ಗುಲಾಬಿ ಹೂವು ನೀಡಿ ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಅವರು, ಪ್ರತಿಯೊಬ್ಬರ ಜೀವಕ್ಕೆ ಬೆಲೆ ಕಟ್ಟಲಾಗದು. ಸಂಚಾರ ನಿಯಮಗಳನ್ನು ಪಾಲಿಸಿ ಜೀವ ರಕ್ಷಣೆ ಮಾಡಿಕೊಳ್ಳಬೇಕು. ನಿಮ್ಮ ರಕ್ಷಣೆ ನಿಮ್ಮ ಕುಟುಂಬದ ರಕ್ಷಣೆ ಇದ್ದಂತೆ. ಕುಟುಂಬದ ಸಂಪೂರ್ಣ ಜವಾಬ್ದಾರಿ ನಿಮ್ಮ ಮೇಲೆ ಇರುವುದರಿಂದ ನಿಯಮ ಮೀರಿ ವರ್ತಿಸಬೇಡಿ ಎಂದು ತಿಳಿಸಿದರು. ಹೂವು ನೀಡಿಮ ಬೈಕ್, ಕಾರು ಸವಾರರಿಗೆ ಸಂಚಾರ ನಿಯಮಗಳ ಬಗ್ಗೆ ಪಿಎಸ್‌ಐ ಜೂಲಕಟ್ಟಿ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net