

ಕುಳಗೇರಿ ಕ್ರಾಸ್ : ಸುಡುಗಾಡು ಸಿದ್ಧ ಸಮುದಾಯದ ಕುಟುಂಬಗಳಿಗೆ ನಿವೇಶನ ಒದಗಿಸಿ ಶಾಶ್ವತ ಸೂರು ಕಲ್ಪಿಸುತ್ತೇನೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಭರವಸೆ ನೀಡಿದರು.ಗ್ರಾಮದ ಎಪಿಎಂಸಿ ಆವರಣದಲ್ಲಿ ಅಲೆಮಾರಿ ಸಮುದಾಯದವರು ಮಂಗಳವಾರ ಹಮ್ಮಿಕೊಂಡಿದ್ದ ಸುಡುಗಾಡು ಸಿದ್ಧ ಸಮಾಜ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ೇತ್ರದಲ್ಲಿ ವಾಸವಿರುವ ಅಲೆಮಾರಿ ಕುಟುಂಬಗಳು ಆತಂಕ ಪಡಬಾರದು. ಆಧುನಿಕ ಕಾಲಟ್ಟದಲ್ಲಿ ಅನೇಕ ಸವಾಲು, ಸಮಸ್ಯೆ ಎದುರಿಸುತ್ತಿರುವುದು ಗಮನಕ್ಕೆ ಬಂದಿದೆ. ಸ್ವಂತ ಸೂರು, ನಿವೇಶನ ಒದಗಿಸುವುದಾಗಿ ೂಷಣೆ ಮಾಡಿದರು.ವಿಜಯಪುರ& ಬಾಗಲಕೋಟೆ ಹಾಲು ಒಕ್ಕೂಟದ ಅಧ್ಯ ಈರಣಗೌಡ ಕರಿಗೌಡ್ರ ಮಾತನಾಡಿದರು. ಸೋಮನಕೊಪ್ಪ ನೀಲಲೋಹಿತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾ.ಪಂ. ಅಧ್ಯೆ ರೇಣುಕಾ ಹಿರಗನ್ನವರ, ಮುಖಂಡರಾದ ಬೀರಪ್ಪ ಶಾಸ್ತ್ರೀ, ನಿಂಗಪ್ಪ ಕುರಿ, ಶ್ರೀಕಾಂತಗೌಡ ಗೌಡ್ರ, ಯಲ್ಲಪ್ಪ ಲೋಕಾಪೂರ, ಶ್ರೀಕಾಂತ ಅಡಪಟ್ಟಿ, ಆರ್.ಎಂ. ದಾದಿ, ಹನಮಂತ ಚಿಕ್ಕೊಪ್ಪ, ಶಾಮಲಾ ಮಾದರ ಇದ್ದರು.
* ಚಿತ್ರ ರ್ಶಿಷಿಕೆ: ಕೆಎಲ್ಆರ್&15&2
ಕುಳಗೇರಿ ಗ್ರಾಮದ ಎಪಿಎಂಸಿ ಆವರಣದಲ್ಲಿ ಅಲೆಮಾರಿ ಸಮುದಾಯದವರು ಮಂಗಳವಾರ ಹಮ್ಮಿಕೊಂಡಿದ್ದ ಸುಡುಗಾಡು ಸಿದ್ಧ ಸಮಾಜ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಜ್ಯೋತಿ ಬೆಳಗಿಸಿದರು. ಸೋಮನಕೊಪ್ಪ ನೀಲಲೋಹಿತ ಸ್ವಾಮೀಜಿ, ವಿಜಯಪುರ&ಬಾಗಲಕೋಟೆ ಹಾಲು ಒಕ್ಕೂಟದ ಅಧ್ಯ ಈರಣಗೌಡ ಕರಿಗೌಡ್ರ, ಗ್ರಾ.ಪಂ. ಅಧ್ಯೆ ರೇಣುಕಾ ಹಿರಗನ್ನವರ ಇದ್ದರು.