ಗಾಳಿಯ ರಭಸಕ್ಕೆ ಹಾರಿಹೋದ ಛಾವಣಿ

25-GPT-2
ಗುಂಡ್ಲುಪೇಟೆ ತಾಲೂಕಿನ ಅಣ್ಣೂರು ಗ್ರಾಮದಲ್ಲಿ ಜೋರುಗಾಳಿಗೆ ಮನೆಗಳ ಛಾವಣಿ ಹಾರಿಹೋಗಿರುವುದು.
Published on

ಗುಂಡ್ಲುಪೇಟೆ: ತಾಲೂಕಿನ ಅಣ್ಣೂರು ಗ್ರಾಮದಲ್ಲಿ ಭಾನುವಾರ ಸಂಜೆ ಬೀಸಿದ ಗಾಳಿಯ ರಭಸಕ್ಕೆ ಮನೆಯ ಛಾವಣಿ ಹಾಗೂ ಹೆಂಚುಗಳು ಹಾರಿ ಹೋಗಿವೆ. ಗ್ರಾಮದ ಉಮೇಶ್ ಎಂಬುವರ ಮನೆಯ ಛಾವಣಿ ಹಾಗೂ ಹೆಂಚುಗಳು ಹಾರಿಹೋಗಿವೆ. ಗ್ರಾಮದ ಮಲ್ಲಿಗಮ್ಮ, ಸಿದ್ದರಾಜು, ಗೌರಮ್ಮ ಮತ್ತು ಗುರುಸಿದ್ದಯ್ಯ ಎಂಬುವರ ಮನೆಗಳ ಛಾವಣಿಗಳೂ ಹಾರಿಹೋಗಿವೆ. ವಿಷಯ ತಿಳಿದ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸೋಮವಾರ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net