ಇತರರಿಗೆ ಮಾದರಿಯಾದ ಈರಣ್ಣ

ತೊಳಸಿಕೆರೆ ಗ್ರಾಮದಲ್ಲಿ ಈರಣ್ಣ ಅವರು ನಾಟಿ ಹಸುವಿನ ಸಗಣಿ ಹಾಗೂ ಮಣ್ಣಿನಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ತಯಾರಿಸಿ ಪ್ರತಿಷ್ಠಾಪಿಸಿರುವುದು.
ತೊಳಸಿಕೆರೆ ಗ್ರಾಮದಲ್ಲಿ ಈರಣ್ಣ ಅವರು ನಾಟಿ ಹಸುವಿನ ಸಗಣಿ ಹಾಗೂ ಮಣ್ಣಿನಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ತಯಾರಿಸಿ ಪ್ರತಿಷ್ಠಾಪಿಸಿರುವುದು.
Published on

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಕಾಡಂಚಿನ ಗ್ರಾಮವಾದ ತೊಳಸಿಕೆರೆಯಲ್ಲಿ ಈರಣ್ಣ ಅವರು ನಾಟಿ ಹಸುವಿನ ಸಗಣಿ ಹಾಗೂ ಮಣ್ಣಿನಿಂದ ಪರಿಸರಸ್ನೇಹಿ ಗಣೇಶ ಮೂರ್ತಿಯನ್ನು ತಯಾರಿಸಿ ಪ್ರತಿಷ್ಠಾಪಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಕೃಷಿಕರಾದ ಈರಣ್ಣ ಅವರು ಸರ್ಕಾರದ ಮಾರ್ಗಸೂಚಿಯಂತೆ 6 ವರ್ಷಗಳಿಂದಲೂ ಗಣೇಶ ಮೂರ್ತಿಯನ್ನು ತಯಾರಿಸಿ ಮನೆಯಲ್ಲಿಯೇ ಪ್ರತಿಷ್ಠಾಪಿಸುತ್ತಿದ್ದಾರೆ.

ಹಬ್ಬಕ್ಕೆ ಒಂದು ವಾರಕ್ಕೆ ಮುಂಚಿತವಾಗಿಯೇ ಹಸುವಿನ ಸಗಣಿ ಹಾಗೂ ಮಣ್ಣನ್ನು ಹದಗೊಳಿಸಿ ಮಂಟಪದೊಂದಿಗೆ ಗಣೇಶ ಮೂರ್ತಿಯನ್ನು ತಯಾರಿಸಿ ಹೋಲಿಕೆಗೆ ತಕ್ಕಂತೆ ವಿವಿಧ ಬಣ್ಣವನ್ನು ಲೇಪನ ಮಾಡಿದ್ದರು. ಶನಿವಾರ ಮನೆಯಲ್ಲಿಯೇ ಪ್ರತಿಷ್ಠಾಪಿಸಿ ಕುಟುಂಬಸ್ಥರೊಂದಿಗೆ ಪೂಜೆ ಸಲ್ಲಿಸಿದರು. ಇವರ ಪರಿಸರ ಸ್ನೇಹಿ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net