ಪುಸ್ತಕದಲ್ಲಿ ಸಿಗುವುದಿಲ್ಲ ಸಂಸ್ಕಾರ

27, srinivaspur photo -2
Published on

ಶ್ರೀನಿವಾಸಪುರ: ವಿದ್ಯೆ ಇದ್ದರೆ ಗೌರವ ಕೊಡುವುದರ ಜತೆಗೆ ಬುದುಕನ್ನು ಕೊಡುತ್ತದೆ. ಬಡತನ ಮರ್ಯಾದೆ ಕೊಡುತ್ತದೆ, ಹಣ ಇದ್ದರೆ ಅಂತಸ್ತು ಕೊಡುತ್ತದೆ ಇವೆಲ್ಲವನ್ನೂ ಕೊಡುವುದು ಸಂಸ್ಕಾರದಿಂದ ಮಾತ್ರ ಎಂದು ಟ್ರಸ್ಟಿ ಹಾಗೂ ಹಿರಿಯ ವಕೀಲ ಕೆ.ವಿ.ಶಂಕರಪ್ಪ ತಿಳಿಸಿದರು.

ತಾಲೂಕಿನ ಗಾಂಡ್ಲಹಳ್ಳಿಯಲ್ಲಿ ಭಾನುವಾರ ಚೌಡಮ್ಮ ಹಿರಣ್ಯಗೌಡ ಆರೋಗ್ಯ ಮತ್ತು ಶಿಕ್ಷಣ ಟ್ರಸ್ಟ್​ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಕೃತಿ ನಮಗೆ ಗುರು, ಸೂರ್ಯ, ಚಂದ್ರರರು ಅವರ ಕೆಲಸವನ್ನು ಮಾಡುತ್ತಾರೆ ಹಾಗೆ ನಾವು ಇರಬೇಕು. ಸಂಸ್ಕಾರವು ಯಾವುದೇ ಪುಸ್ತಕದಲ್ಲಿ ಸಿಗುವುದಿಲ್ಲ. ಎಲ್ಲ ಮಹಾ ಗ್ರಂಥಗಳಲ್ಲಿ ವ್ಯಾಖ್ಯಾನಗಳಿವೆ. ವಿದ್ಯಾವಂತರಾಗಿ ಉನ್ನತ ಹುದ್ದೆಗಳಲ್ಲಿ ಕೆಲಸಮಾಡಿದಾಗ ಕೇವಲ ತನ್ನ ಕುಟುಂಬದ ನಿರ್ವಹಣೆ ಮಾಡುವುದಲ್ಲ. ನಿಮ್ಮ ಈ ಉನ್ನತಕ್ಕೆ ಕಾರಣ ಕುಟುಂಬದವರು ಹಾಗು ಸಮಾಜ ಸೇವೆಯ ಮೂಲಕ ಋಣ ತೀರಸಬೇಕಾಗಿದೆ ಎಂದರು.

ಐಎಎಸ್​ ಅಧಿಕಾರಿ ಕೆ.ಎಚ್​.ಗೋವಿಂದರಾಜು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾವಕಾಶ ಗಳಿಸುವುದು ಕಷ್ಟ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ರ್ನಿದಿಷ್ಟ ಗುರಿಯೊಂದಿಗೆ ಶ್ರದ್ಧೆಯಿಂದ ಶಿಕ್ಷಕರು ಬೋಧಿಸುವ ಪಾಠಪ್ರವಚನಗಳನ್ನು ಆಲಿಸಿ ಜೀವನದ ಗುರಿ ಮುಟ್ಟಲು ಪ್ರಯತ್ನಿಸಬೇಕು ಎಂದರು.

ನಿವೃತ್ತ ಐಎಎಸ್​ ಅಧಿಕಾರಿ ಕೆ.ಎಚ್​.ಶ್ರೀನಿವಾಸ್​ ಮಾತನಾಡಿ, ವಿದ್ಯಾರ್ಥಿಗಳು ಆರೋಗ್ಯಕರ ಹವ್ಯಾಸ ರೂಢಿಸಿಕೊಳ್ಳುವ ಮೂಲಕ ಕನಸು ಕಟ್ಟಿಕೊಂಡು ಶಿಕ್ಷಣ ಕೊಡಿಸುವ ಪಾಲಕರಿಗೆ ಒಳ್ಳೆಯ ಹೆಸರು ತರಬೇಕು ಎಂದರು.

20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಶ್ರೀ ಚಂದ್ರಮೌಳೇಶ್ವರ ಭವನವನ್ನು ಚೌಡಮ್ಮ ಅವರು ಉದ್ಘಾಟಿಸಿದರು.

ಮುಖಂಡ ದರ್ಶನ್​, ಬೆಂಗಳೂರು ಡೇರಿ ವ್ಯವಸ್ಥಾಪಕ ವೆಂಕಟೇಶ್​ಪ್ರಸಾದ್​, ರವಿಕುಮಾರ್​, ಎಂ.ನಾಗರಾಜ್​, ವೆಂಕಟಾಚಲಪತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net