

ನಾಪೋಕ್ಲು: ಇದೀಗ ಕಾಫಿ ಕೊಯ್ಲಿನ ಸಮಯ. ರೆಂಬೆಗಳಲ್ಲಿರುವ ಕಾಫಿಯನ್ನು ಕೊಯ್ಲು ಮಾಡಿ ತಂದು ಒಣಗಿಸುವುದು ಸಾಮಾನ್ಯ. ಆದರೆ ಇಲ್ಲಿ ಕಾಫಿ ಗಿಡದ ಮುಖ್ಯ ಕಾಂಡದಲ್ಲೇ ಕಾಫಿಯ ಗೊಂಚಲು ಹಣ್ಣಾಗಿ ಅಚ್ಚರಿಯನ್ನುಂಟು ಮಾಡಿದೆ.
ಈ ವಿಚಿತ್ರ ಕಂಡು ಬಂದಿದ್ದು ಸಮೀಪದ ಕಕ್ಕಬೆ ಗ್ರಾಮ ಪಂಚಾಯಿತಿಯ ಯವಕಪಾಡಿಯ ಗ್ರಾಮದ ಕೋಡಿಮನಿಯಂಡ ಎಂ.ಮೊಣ್ಣಪ್ಪ ಅವರ ಕಾಫಿ ತೋಟದಲ್ಲಿ. ಕಾಂಡದಲ್ಲಿ ಮೂಡಿದಗೊಂಚಲು ಕಾಫಿ ಹಣ್ಣು ಅಚ್ಚರಿಗೆ ಕಾರಣವಾಗಿದೆ.
ಈ ವಿಸ್ಮಯವನ್ನು ಗ್ರಾಮದ ಕಾಫಿ ಬೆಳೆಗಾರ ಪಾಂಡಟಡ ನರೇಶ್ ಗಮನಿಸಿದ್ದು, ಈ ಒಂದು ಗಿಡದಲ್ಲಿ ಪ್ರತಿ ವರ್ಷ ಕಾಂಡದಲ್ಲೇ ಹೂ ಬಿಟ್ಟು ಕಾಫಿ ಆಗುತ್ತಿದೆ ಎಂದು ವಿಜಯವಾಣಿಗೆ ತಿಳಿಸಿದರು.