ಅಕ್ಕಿ ಮೇಲೆ ನಾಡಗೀತೆ ಬರೆದ ಸಾಧಕ: 80 ನಿಮಿಷದಲ್ಲಿ 136 ಅಕ್ಕಿಕಾಳನ್ನು ಬಳಸಿ ಸಾಧನೆ

rice art
Published on

ಸುಬ್ರಹ್ಮಣ್ಯ: ಅಕ್ಕಿ ಕಾಳಿನ ಮೇಲೆ ಬರೆಯುವ ಕಲೆ ಕರಗತ ಮಾಡಿಕೊಂಡಿರುವ ಕುಕ್ಕೆ ಸುಬ್ರಹ್ಮಣ್ಯದ ಮೈಕ್ರೋ ಪರಮೇಶ್, 80 ನಿಮಿಷದಲ್ಲಿ 136 ಅಕ್ಕಿ ಕಾಳನ್ನು ಬಳಸಿ ನಾಡಗೀತೆ ಬರೆದಿದ್ದಾರೆ.

ಕನಿಷ್ಠ ಅವಧಿಯಲ್ಲಿ ಕಡಿಮೆ ಅಕ್ಕಿ ಕಾಳಿನಲ್ಲಿ ಸಾಧನೆ ಮೆರೆದಿರುವುದು ಇವರ ಸಾಧನೆ. ಮುಂದೆ ವಂಡರ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ತಂಡದ ಮುಂದೆ ಈ ಸಾಧನೆಯನ್ನು ಪ್ರಸ್ತುತ ಪಡಿಸಲಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಉದ್ಯಮಿಯಾಗಿರುವ ಪರಮೇಶ್ ಮೂಲತಃ ಹಾವೇರಿಯವರು. ಅಕ್ಕಿ ಕಾಳಿನಲ್ಲಿ ಬರೆದ ಸಂಪೂರ್ಣ ನಾಡಗೀತೆಯನ್ನು ಫ್ರೇಮ್ ಅಳವಡಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸುನೀಲ್ ಕುಮಾರ್ ಅವರಿಗೆ ನೆನಪಿನ ಕಾಣಿಕೆಯಾಗಿ ನೀಡಿದ್ದಾರೆ.

ಗಿನ್ನೆಸ್ ರೆಕಾರ್ಡ್ ಸಿದ್ಧತೆ: ನರೇಂದ್ರಮೋದಿ ಅವರ ಜೀವನ ಚರಿತ್ರೆಯನ್ನು 10 ಸಾವಿರಕ್ಕೂ ಅಧಿಕ ಅಕ್ಕಿ ಕಾಳಿನಲ್ಲಿ ಕನಿಷ್ಠ ಅವಧಿಯಲ್ಲಿ ಬರೆದು ಗಿನ್ನೆಸ್ ರೆಕಾರ್ಡ್ ಮಾಡುವತ್ತ ಅಭ್ಯಾಸ ಮಾಡುತ್ತಿದ್ದಾರೆ. ಅಕ್ಕಿ ಕಾಳಿನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಮಹಾತ್ಮೆ ಬರೆಯುವ ಹಂಬಲ ಈ ಕಲಾವಿದನದ್ದು.

ಅಕ್ಕಿ ಕಾಳಿನ ಮೇಲೆ ಬರೆಯುವ ಸೂಕ್ಷ್ಮ ಕಲೆಯಲ್ಲಿ ವಿಶ್ವ ದಾಖಲೆ ಮಾಡುವ ಹಂಬಲ ನನ್ನದು. ಪ್ರಧಾನಿ ನರೇಂದ್ರಮೋದಿ ಅವರ ಜೀವನ ಚರಿತ್ರೆ ಬರೆದು ದಾಖಲೆ ನಿರ್ಮಿಸುವ ಸಿದ್ಧತೆಯಲ್ಲಿದ್ದೇನೆ.

| ಮೈಕ್ರೋ ಪರಮೇಶ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net