ಪುರಾಣದ ಪ್ರಜ್ಞೆ ಮೂಡಿಸುವ ತಾಳಮದ್ದಲೆ

11sgr4
ಸಾಗರದಲ್ಲಿ ಶ್ರೀಕೃಷ್ಣ ದರ್ಶನ ತಾಳಮದ್ದಲೆ ಕಾರ್ಯಕ್ರಮವನ್ನು ಶ್ರೀಧರ ಹೆಗಡೆ ಉದ್ಘಾಟಿಸಿ ಮಾತನಾಡಿದರು. ಜಯಶ್ರೀ, ಭಾರತಿ ಅನಂತ್, ಶಂಕರಶಾಸ್ತಿç, ಸೂರ್ಯನಾರಾಯಣ, ಸುಬ್ರಾಯ ಹೆಗಡೆ ಗುಂಡೂಮನೆ, ರಮೇಶ್ ಹೆಗಡೆ ಗುಂಡೂಮನೆ ಇತರರಿದ್ದರು.
Published on

ಸಾಗರ: ಪುರಾಣಗಳ ಕಥಾನಕಗಳನ್ನು ಮತ್ತೆ ಸ್ಥಾಯಿಗೊಳಿಸುವಲ್ಲಿ ಯಕ್ಷಗಾನ ತಾಳಮದ್ದಲೆ ಮಾಡುತ್ತಿರುವ ಕೆಲಸ ಬಹುಮುಖ್ಯವಾದುದು. ಅದನ್ನು ಹೊಸ ತಲೆಮಾರಿಗೆ ತಲುಪಿಸುವ ಕೆಲಸ ಆಗಬೇಕು ಎಂದು ರಾಷ್ಟಿçÃಯ ಜೀವವಿಮಾ ನಿಗಮದ ಸಾಗರ ಶಾಖಾ ವ್ಯವಸ್ಥಾಪಕ ಶ್ರೀಧರ ಹೆಗಡೆ ಹೇಳಿದರು.

ನಗರದಲ್ಲಿ ಭಾನುವಾರ ಶ್ರೀರಾಜರಾಜೇಶ್ವರಿ ಕೃಪಾಪೋಷಿತ ವಂಶವಾಹಿನಿ ಯಕ್ಷಮೇಳ ಗುಂಡೂಮನೆಯವರು ಸಂಯೋಜಿಸಿರುವ ಏಕಾದಶ ಚಾತುರ್ಮಾಸ್ಯ ಪಾಕ್ಷಿಕ ತಾಳಮದ್ದಲೆ- ದರ್ಶನ ೬ನೇ ಶ್ರೀಕೃಷ್ಣದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಪ್ರದರ್ಶನಗಳಿಗಿಂತ ತಾಳಮದ್ದಲೆಯಲ್ಲಿ ಪೌರಾಣಿಕ ಕತೆಯನ್ನು ಹೆಚ್ಚು ನೋಡಬಹುದಾಗಿದ್ದು ಅದನ್ನು ಪ್ರೋತ್ಸಾಹಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಮಹಿಳಾ ಅರ್ಥಧಾರಿ ಜಯಶ್ರೀ, ಲೇಖಕಿ ಭಾರತಿ ಅನಂತ್, ಯಕ್ಷ ಸಂಶೋಧಕ ಡಾ.ಶಂಕರ ಶಾಸ್ತಿç, ಭಾಗವತ ಸೂರ್ಯನಾರಾಯಣ, ವಂಶವಾಹಿನಿ ಸಂಸ್ಥೆಯ ಗೌರವಾಧ್ಯಕ್ಷ ಸುಬ್ರಾಯ ಹೆಗಡೆ ಗುಂಡೂಮನೆ, ರಮೇಶ್ ಹೆಗಡೆ ಗುಂಡೂಮನೆ ಇತರರಿದ್ದರು. ನಂತರ ಮೂಲಿಕೆ ರಾಮಕೃಷ್ಣಯ್ಯ ರಚಿಸಿದ ಶ್ರೀಕೃಷ್ಣ ದರ್ಶನ ಪ್ರಸಂಗದ ತಾಳಮದ್ದಲೆ ನಡೆಯಿತು.
ಹಿಮ್ಮೇಳದಲ್ಲಿ ಸೂರ್ಯನಾರಾಯಣ ಹೆಗಡೆ, ಕು.ಸೃಜನ್‌ಗಣೇಶ್ ಹೆಗಡೆಯವರ ಭಾಗವತಿಕೆ, ಗಣೇಶ್‌ಭಟ್ ಮಣಗೋಡು ಮದ್ದಲೆ, ರಕ್ಷಿತ್ ಚೆಂಡೆ, ಅರ್ಥಧಾರಿಗಳಾಗಿ ಅರುಣ್ ಬೆಂಕಟವಳ್ಳಿ, ರವಿಶಂಕರ್ ಭಟ್ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net