ಲೋಕ ಅದಾಲತ್‌ನಲ್ಲಿ ಮತ್ತೆ ಒಂದಾದ ಜೋಡಿ

LOK ADALATH
Published on

ಲಕ್ಷ್ಮೇಶ್ವರ: ಪಟ್ಟಣದ ಕಿರಿಯ ದಿವಾಣಿ ಮತ್ತು ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಬಾಕಿ ಉಳಿದಿದ್ದ 382 ಕೇಸುಗಳು ಮತ್ತು ಒಟ್ಟು 4,16,33,613 ರೂ. ಮೊತ್ತದ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, ವ್ಯಾಜ್ಯ ಪೂರ್ವ ಪ್ರಕರಣಗಳಿಗೆ ಸಂಬಂಧಿಸಿದಂತೆ 140 ಕಂದಾಯ ಪ್ರಕರಣಗಳು, 45 ವಿವಿಧ ಬ್ಯಾಂಕ್ ಪ್ರಕರಣಗಳು ಸೇರಿ 1,00,98,000 ರೂ. ಮೊತ್ತದ ಪ್ರಕರಣಗಳ ರಾಜಿ ಸಂಧಾನ ಮಾಡಲಾಗಿದೆ.

ಲಕ್ಷೇಶ್ವರದ ಲೋಕ ಅದಾಲತ್‌ನಲ್ಲಿ 2 ಬೆಂಚ್‌ಗಳನ್ನು ಸ್ಥಾಪಿಸಲಾಗಿತ್ತು. ಹಿರಿಯ ದಿವಾಣಿ ನ್ಯಾಯಾಧೀಶೆ ಸರ್ವಮಂಗಳ ಕೆ.ಎಂ. ಮತ್ತು ಕಿರಿಯ ದಿವಾಣಿ ನ್ಯಾಯಾಧೀಶ ಅಪ್ಪಾಸಾಬ ನಾಯಿಕ ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು.

ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದ ಗಂಡ-ಹೆಂಡತಿಯನ್ನು ಲೋಕ ಅದಾಲತ್‌ನಲ್ಲಿ ಮರುಹೊಂದಾಣಿಕೆ ಮಾಡಿ ಒಂದುಗೂಡಿಸಲಾಯಿತು.

ಬಿ.ಎಸ್. ಬಾಳೇಶ್ವರಮಠ, ಎಂ.ಪಿ, ಯಲವಗಿ, ಶಕೀಲಾ ಮುಳಗುಂದ, ವಿ.ಆರ್.ಪಾಟೀಲ, ಬಿ.ವಿ. ನೇಕಾರ, ಎಸ್.ಎಸ್. ಶೆಟ್ಟರ, ಎಸ್.ಸಿ. ನರಸಮ್ಮನವರ, ಎನ್.ಐ. ಬೆಲ್ಲದ, ಬಿ.ಎನ್. ಸಂಶಿ, ವಿ.ಆರ್. ಪಾಟೀಲ, ಎನ್.ಎಂ. ರಿತ್ತಿಮಠ, ಉಮಾ ಬಳ್ಳಾರಿ, ವಿ. ಎಸ್.ಪಶುಪತಿಹಾಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net