

ಪಿ.ಮಂಜುನಾಥರೆಡ್ಡಿ, ಬಾಗೇಪಲ್ಲಿ
ಕೈಕೊಟ್ಟ ಮುಂಗಾರು ಮಳೆಯಿಂದ ತತ್ತರಿಸಿರುವ ರೈತರ ಸಂಕಷ್ಟಗಳಿಗೆ ಸರ್ಕಾರ ಬೆಳೆ ವಿಮೆ ಜತೆಗೆ ವಿಶೇಷ ಕೃಷಿ ಪ್ಯಾಕೇಜ್ ೂಷಣೆ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ಕೃಷಿ ೇತ್ರಕ್ಕೆ ಪೆಟ್ಟು ಬೀಳುವುದು ಗ್ಯಾರಂಟಿಯಾಗಿದೆ.
ಕಸಬಾ, ಚೇಳೂರು, ಪಾತಪಾಳ್ಯ, ಗೂಳೂರು ಹಾಗೂ ಮಿಟ್ಟೇಮರಿ ಹೋಬಳಿ ವ್ಯಾಪ್ತಿಯ ಖುಷ್ಕಿ ಜಮೀನಿನ ರೈತರು ಮೆಕ್ಕೆಜೋಳ, ನೆಲಗಡಲೆ, ತೊಗರಿ, ಭತ್ತದ ಬೆಳೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಕೃಷಿ ಇಲಾಖೆ ಅಂಕಿ ಅಂಶಗಳ ಪ್ರಕಾರ ಈಗಾಗಲೇ 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು. ಆದರೆ 17,700 ಹೆಕ್ಟೇರ್ ವಿಸ್ತೀರ್ಣದ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದ್ದು, ಶೇ.52 ಪ್ರದೇಶದಲ್ಲಿ ಮಾತ್ರ ಕೃಷಿ ಚಟುವಟಿಕೆಗಳು ನಡೆದಿವೆ. ಉಳಿದ ಶೇ.48 ಪ್ರದೇಶದ ಕೃಷಿ ಜಮೀನುಗಳು ಬೀಳು (ಪಾಳು) ಬಿದ್ದಿವೆ. ಈಗಾಗಲೆ ಬಿತ್ತನೆ ಮಾಡಿರುವ ಕೃಷಿ ಬೆಳೆಗಳು ತೇವಾಂಶ ಕೊರತೆಯಿಂದ ಸಂಪೂರ್ಣ ಹಾನಿಯಾಗಿವೆ.
ಮಳೆ ಬಂದರೂ ಬೆಳೆ ಗ್ಯಾರಂಟಿ ಇಲ್ಲ
ಬಾಗೇಪಲ್ಲಿ ಮತ್ತು ಚೇಳೂರು ತಾಲೂಕು ವ್ಯಾಪ್ತಿಯಲ್ಲಿ ಈ ಬಾರಿ ಬೀಳಬೇಕಾಗಿದ್ದ ವರ್ಷದ ವಾಡಿಕೆ ಮಳೆಗಿಂತ ಶೇ.36 ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದಿದ್ದು, ಮುಂಗಾರಿನಲ್ಲಿ ಬಿತ್ತನೆ ಮಾಡಿರುವ ಮಳೆಯಾಶ್ರಿತ ಬೆಳೆಗಳಾದ ನೆಲಗಡಲೆ, ಮೆಕ್ಕೆಜೋಳ, ಭತ್ತ ಹಾಗೂ ತೊಗರಿ ಬೆಳೆಗಳು ಮಳೆ ಅಭಾವದಿಂದ ಈಗಾಗಲೇ ನೆಲಕಚ್ಚುತ್ತಿವೆ. ಜೂನ್&ಜುಲೈ ಮಾಹೆಯಲ್ಲಿ ಶೇ.53 ಮಳೆ ಕಡಿಮೆ ಬಿದ್ದಿದ್ದು, ಇದೀಗ ಮಳೆ ಬಂದರೂ ಉಳಿದ ಬೆಳೆಗಳು ರೈತರ ಕೈಗೆ ಸಿಗುವ ಭರವಸೆ ಹುಸಿಯಾಗಿದೆ.
ಮೇವಿಗೂ ಬರ
ತಾಲೂಕಿನ ಬಹುತೇಕ ಪ್ರದೇಶದಲ್ಲಿರುವ ಬೆಳೆಗಳು ಒಣಗಿರುವುದರಿಂದ ಜಾನುವಾರುಗಳ ಸಾಕಾಣಿಕೆಗೆ ಅಗತ್ಯವಿರುವ ನೆಲಗಡಲೆ, ಮೆಕ್ಕೆಜೋಳದ ಮೇವಿಗೂ ಮುಂದಿನ ದಿನಗಳಲ್ಲಿ ಬರ ಬರಲಿದ್ದು, ಮುನ್ನೆಚ್ಚರಿಕೆಯಾಗಿ ಗೋಶಾಲೆಗಳನ್ನು ತೆರೆಯಲು ತಾಲೂಕು ಆಡಳಿತ ಸನ್ನದ್ಧವಾಗಬೇಕಿದೆ.
ಪ್ರಸಕ್ತ ವರ್ಷದ ಮುಂಗಾರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರೈತರು ಬೆಳೆದಿರುವ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ಮಳೆ ಬಂದರೂ ಪ್ರಯೋಜನ ಇಲ್ಲದಂತಾಗಿದೆ. ಬಾಗೇಪಲ್ಲಿ ಮತ್ತು ಚೇಳೂರು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ೂಷಿಸಿ ರೈತರಿಗೆ ವಿಶೇಷ ಬೆಳೆ ವಿಮೆ ಸೌಲಭ್ಯ ಕಲ್ಪಿಸಿ, 2024ರ ಮುಂಗಾರು ಬಿತ್ತನೆ ಬೀಜ ಉಚಿತ ವಿತರಣೆ ಮಾಡಬೇಕಿದೆ.
ಕೆ.ಎಂ.ರಾಮರೆಡ್ಡಿ, ತಾಪಂ ಮಾಜಿ ಅಧ್ಯಕ್ಷ, ಬಾಗೇಪಲ್ಲಿ
ಬಾಗೇಪಲ್ಲಿ ಮತ್ತು ಚೇಳೂರು ತಾಲೂಕು ವ್ಯಾಪ್ತಿಯ 23 ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ತಾಲೂಕು ಆಡಳಿತ, ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಬೆಳೆ ನಷ್ಟದ ಸಮೀೆ ವರದಿಯನ್ನು ಆ.30 ರಂದು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದೇವೆ, ಸರ್ವೇ ವೇಳೆ ತೇವಾಂಶದ ಕೊರತೆಯಿಂದ ಶೇ.50 ಬೆಳೆ ಹಾನಿ ಆಗಿರುವುದು ಕಂಡು ಬಂದಿದ್ದು, ಬರಪೀಡಿತ ತಾಲೂಕು ೂಷಣೆ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ.
ಎನ್.ವಿ.ಪ್ರಕಾಶ್, ಕೃಷಿ ಸಹಾಯಕ ನಿರ್ದೇಶಕ, ಬಾಗೇಪಲ್ಲಿ