

ರೋಣ: ತಾಲೂಕಿನ ಮಲ್ಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಭಾನುವಾರ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಬಣ 10ರಲ್ಲಿ 7 ಸ್ಥಾನ ಗೆದ್ದುಕೊಂಡಿದೆ. ಈ ಮೊದಲು ಎರಡು ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದು, ಒಟ್ಟು 9 ಸ್ಥಾನಗಳನ್ನು ಲಿಂಗರಾಜ ಪಾಟೀಲ ಬಣಕ್ಕೆ ಲಭಿಸಿದಂತಾಗಿದೆ. ಹಿಂದಿನ 5 ವರ್ಷದ ಅವಧಿಗೆ ಲಿಂಗರಾಜ ಪಾಟೀಲ ಅವರೇ ಕಾರ್ಯರ್ವಹಿಸಿದ್ದರು.
ಸಾಮಾನ್ಯ ಕ್ಷೇತ್ರದಿಂದ ಅಂದಾನಗೌಡ ಉಗಲಾಟ, ಮಹೇಶ ಸತ್ತಿಗೇರಿ, ಲಿಂಗರಾಜ ಪಾಟೀಲ, ಶಂಕರಗೌಡ ಪಾಟೀಲ, ಸುಭಾಸ ದಾನಪ್ಪಗೌಡ್ರ, ಅ ವರ್ಗದಿಂದ ಮಂಜುನಾಥ ಸುಂಕದ, ಬ ವರ್ಗದಿಂದ ಬಸನಗೌಡ ಕಲ್ಲನಗೌಡ್ರ, ಮಹಿಳಾ ಕ್ಷೇತ್ರದಿಂದ ಕಸ್ತೂರೆವ್ವ ಚಳಗೇರಿ, ನಿರ್ಮಲಾ ನರಿಯವರ, ಬಿನ್ ಸಾಲಗಾರ ಕ್ಷೇತ್ರದಿಂದ ಶಂಕ್ರಪ್ಪ ಕೊಳ್ಳದ, ಎಸ್‌ಸಿ ವರ್ಗದಿಂದ ಹಣಮಂತ ಛಲವಾದಿ (ಅವಿರೋಧ) ಎಸ್‌ಟಿ ವರ್ಗದಿಂದ ಮೃತ್ತುಂಜಯ ಹೊಸಮನಿ (ಅವಿರೋಧ) ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾಗಿ ಸಹಕಾರ ಇಲಾಖೆಯ ಪ್ರಕಾಶ ಹಳ್ಳಿ, ಪ್ರಶಾಂತ ಮುಧೋಳ ಕಾರ್ಯನಿರ್ವಹಿಸಿದರು.