ಶಿವಮೊಗ್ಗದ ಸಕ್ರೆಬೈಲು ಬಳಿ ಅಪಘಾತದಲ್ಲಿ ಕುಪ್ಪೆಪದವು ನಿವಾಸಿ ಮೃತ್ಯು

Ashraf
ಅಶ್ರಫ್
Published on

ಗುರುಪುರ: ಶಿವಮೊಗ್ಗ-ತೀರ್ಥಹಳ್ಳಿ ರಸ್ತೆಯ ಸಕ್ರೆಬೈಲು ಆನೆ ಕ್ಯಾಂಪ್ ಬಳಿ ಮಂಗಳವಾರ ಖಾಸಗಿ ಬಸ್ ಮತ್ತು ಕಾರಿನ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕುಪ್ಪೆಪದವಿನ ಬಾರ್ದಿಲ ಬಾಲೆಮಾರ್ ನಿವಾಸಿ ಮೊಹಮ್ಮದ್ ಅಶ್ರಫ್(43) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಾರ್ದಿಲ ನಿವಾಸಿ ಇಸ್ಮಾಯಿಲ್ ಶರೀಫ್, ಕುಪ್ಪೆಪದವಿನ ಮೊಹಮ್ಮದ್ ಶರೀಫ್, ಗಂಜಿಮಠದ ಅಸ್ಲಾಂ ಮತ್ತು ಮಂಗಳೂರು ಬಂದರು ನಿವಾಸಿ ಹೈದರ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿವಮೊಗ್ಗದಿಂದ ಔಷಧ ತರಲೆಂದು ಹೋಗಿದ್ದ ಐವರು ಕಾರಿನಲ್ಲಿ ಮಂಗಳೂರಿನತ್ತ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಾರು ನಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಗೆ ಅಶ್ರಫ್ ದೇಹ ಕಾರಿನೊಳಗೆ ನಿಲುಕಿಕೊಂಡಿದ್ದು, ಉಳಿದ ನಾಲ್ವರು ಕಾರಿನಿಂದ ಹೊರಗೆ ಎಸೆಯಲ್ಪಟ್ಟಿದ್ದರು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ನಾಲ್ವರನ್ನೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net