ವಿಶೇಷ ಯೋಜನೆ ರೂಪಿಸಲು ಸರ್ಕಾರಕ್ಕೆ ಮನವಿ

IMG_20230917_122157
Published on

ನುಗ್ಗೇಹಳ್ಳಿ: ಸರ್ವಜನರ ಏಳಿಗೆಗೆ ಶ್ರಮಿಸುವ ವಿಶ್ವಕರ್ಮ ಜನಾಂಗಕ್ಕೆ ವಿಶೇಷ ಯೋಜನೆ ರೂಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಶಾಸಕ ಸಿ.ಎನ್.ಬಾಲಕೃಷ್ಣ ಭಾನುವಾರ ಭರವಸೆ ನೀಡಿದರು.

ಗ್ರಾಮದ ವಿಶ್ವಕರ್ಮ ಸಮಾಜದಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಿರಾಟ್ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು. ವಿಶ್ವಕರ್ಮ ಸಮಾಜದವರಿಗೆ ಆಧುನಿಕ ಯಂತ್ರೋಪಕರಣಗಳ ಘಟಕಗಳ ಸ್ಥಾಪನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಿಯಾಯಿತಿ ದರದ ಅನುದಾನ ನೀಡಿದರೆ ಸಂಕಷ್ಟದಲ್ಲಿರುವ ಸಮುದಾಯದವರಿಗೆ ಅನುಕೂಲವಾಗುತ್ತದೆ ಎಂದರು.

ಸಮಾರಂಭದಲ್ಲಿ ವಿಶ್ವಕರ್ಮ ಸಂಘದ ಅಧ್ಯಕ್ಷ ಎನ್.ಅಪ್ಪಾಜಿ, ಉಪಾಧ್ಯಕ್ಷ ಪ್ರಕಾಶ್, ಶೇಖರಾಚಾರ್, ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದೊರೆಸ್ವಾಮಿ, ನಿರ್ದೇಶಕರಾದ ಎಚ್.ಪಿ.ಸಂಪತ್, ದೀಪು, ಉಮೇಶ್ ಆಚಾರ್, ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್, ಯಲ್ಲಪ್ಪ, ಸಮಾಜದ ಮುಖಂಡರಾದ ರವಿಶಾಚಾರ್, ಹೇಮಂತ್,ಮಹೇಶ್, ಗುರು, ಜಗಣ್ಣ, ಚಿನ್ನೇನಹಳ್ಳಿ ಸುರೇಶ್, ಯಾಚನಘಟ್ಟ ಸುರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net