ಮಠಾಧೀಶರಿಗೆ ಭದ್ರತೆ ಒದಗಿಸಲು ಮನವಿ

SVR manavi
Published on

ಸವಣೂರ: ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಕಾಮಕುಮಾರ ನಂದಿಮಹಾರಾಜ ಹಾಗೂ ಟಿ.ನರಸಿಪುರದ ಹಿಂದು ಕಾರ್ಯಕರ್ತ ವೇಣುಗೋಪಾಲ ಹತ್ಯೆಗೈದವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಶ್ರೀರಾಮಸೇನಾ ವತಿಯಿಂದ ತಹಸೀಲ್ದಾರ್ ಅನಿಲಕುಮಾರ ಜಿ., ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಸಾಧು-ಸಂತರಿಗೆ, ಮಠಾಧೀಶರಿಗೆ ಭದ್ರತೆ ಒದಗಿಸಬೇಕು. ರಾಜ್ಯದಲ್ಲಿ ಹತ್ಯೆಯಾದ ಹಿಂದು ಕಾರ್ಯಕರ್ತರಿಗೆ ಸೂಕ್ತ ನ್ಯಾಯ ಒದಗಿಸಿ ಹಂತಕರಿಗೆ ಶಿಕ್ಷೆಯನ್ನು ವಿಧಿಸಬೇಕು. ಮುಂದಿನ ದಿನಗಳಲ್ಲಿ ಈ ರೀತಿಯ ಕೃತ್ಯಗಳು ನಡೆಯದಂತೆ ಶಾಂತಿ-ಸೌಹಾರ್ದ ಕಾಪಾಡಲು ಎಚ್ಚರಿಕೆ ವಹಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಗದಿಗೆಪ್ಪ ಕುರವತ್ತಿ, ತಾಲೂಕು ಅಧ್ಯಕ್ಷ ಅರುಣ ಮೆಕ್ಕಿ, ಪದಾಧಿಕಾರಿಗಳಾದ ಪ್ರವೀಣ ಬಾಲೇಹೊಸೂರ, ಪ್ರವೀಣ ಚರಂತಿಮಠ, ಈರಯ್ಯ ಹಿರೇಮಠ, ಸಿದ್ದಾರೂಢ ವಿಭೂತಿಮಠ, ಈರಣ್ಣ ಜೇಕಿನಕಟ್ಟಿ, ಅಶೋಕ ಧಾರವಾಡ, ಗಜಾನನ ರಾಶಿನಕರ, ಅಕ್ಷಯ ಕಲಾಲ, ಗಿರೀಶ ಬಗರೆ, ಶ್ರೀಕಾಂತ ಕೆ. ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net