ಶೈಕ್ಷಣಿಕ ಚಟುವಟಿಕೆ ವೇಳಾಪಟ್ಟಿ ಬದಲಿಸಲು ಮನವಿ

A request to change the academic activity schedule
ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶೈಕ್ಷಣಿಕ ಚಟುವಟಿಕೆಯ ನಿರ್ವಹಣೆ ನೂತನ ವೇಳಾಪಟ್ಟಿ ಬದಲಾವಣೆ ಮಾಡುವಂತೆ ಸರ್ಕಾರಿ ನೌಕರ ಸಂಘದಿಂದ ಡಿಡಿಪಿಐ ಕಚೇರಿಯ ಪತ್ರಾಂಕಿತ ಸಹಾಯಕ ಎಸ್.ಎಂ. ಕೋಟಿನ ಅವರ ಮೂಲಕ ಡಿಡಿಪಿಐಗೆ ಮನವಿ ಸಲ್ಲಿಸಲಾಯಿತು. ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವರಾಜ ಬಿರಾದಾರ, ಖಜಾಂಚಿ ಜುಬೇರ ಕೆರೂರ, ಪ್ರಧಾನ ಕಾರ್ಯದರ್ಶಿ ರಾಜಶೇಖರ ದೈವಾಡಿ ಇದ್ದರು.
Published on

ವಿಜಯಪುರ: ರಾಜ್ಯ ಸರ್ಕಾರ ಪಠ್ಯಕ್ರಮ ಕುರಿತು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶೈಕ್ಷಣಿಕ ಚಟುವಟಿಕೆಯ ನಿರ್ವಹಣೆಗೆ ಬೆಳಗ್ಗೆ 9.30ರಿಂದ 4.20ರವರೆಗೆ ಸಮಯ ನಿಗದಿಪಡಿಸಿದೆ. ಇದರ ಬದಲಿಗೆ 10.20ರಿಂದ 4.40ರವರೆಗೆ ಅವಧಿ ಬದಲಿಸಿ ಮರು ಆದೇಶ ಹೊರಡಿಸಬೇಕು ಎಂದು ಸರ್ಕಾರಿ ನೌಕರ ಸಂಘದಿಂದ ಶುಕ್ರವಾರ ಡಿಡಿಪಿಐ ಕಚೇರಿಯ ಪತ್ರಾಂಕಿತ ಸಹಾಯಕ ಎಸ್.ಎಂ. ಕೋಟಿ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ ಮಾತನಾಡಿ, ಹೊಸ ವೇಳಾಪಟ್ಟಿ ಪ್ರಕಾರ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿದೆ. ವಿಶೇಷವಾಗಿ ಜಿಲ್ಲೆಯಲ್ಲಿ ಸಾರಿಗೆ ಬಸ್ ಅವಲಂಬಿಸಿರುವ ವಿದ್ಯಾರ್ಥಿಗಳು ತೊಂದರೆ ಅನುಭವಿಸಿ ಸ್ವಲ್ಪ ತಡವಾಗಿ ಶಾಲೆಗೆ ಆಗಮಿಸುತ್ತಾರೆ. ಬೆಳಗ್ಗೆ ಕೆಲವು ವಿದ್ಯಾರ್ಥಿಗಳು ಉಪಹಾರ ಸೇವಿಸದೇ ಬರುತ್ತಾರೆ. ಈ ಹಿಂದಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿಗೆ ಎಲ್ಲ ವಿದ್ಯಾರ್ಥಿಗಳು ಹೊಂದಿಕೊಂಡಿರುತ್ತಾರೆ. ಪಾಲಕರು ಕೆಲಸಕ್ಕೆ ಹೋಗುವುದರಿಂದ ವಿದ್ಯಾರ್ಥಿಗಳು ಸಿದ್ಧರಾಗಿ ಬರಲು ಸ್ವಲ್ಪ ಸಮಯ ಬೇಕು ಎಂದರು.

ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವರಾಜ ಬಿರಾದಾರ, ನೌಕರರ ಸಂಘದ ಜಿಲ್ಲಾ ಖಜಾಂಚಿ ಜುಬೇರ ಕೆರೂರ, ಪ್ರಧಾನ ಕಾರ್ಯದರ್ಶಿ ರಾಜಶೇಖರ ದೈವಾಡಿ, ಮಲ್ಲನಗೌಡ ಹಡಲಗೇರಿ, ಜೆ.ಎಸ್. ಬೋಳಸೂರ, ನೀಜು ಮೇಲಿನಕೇರಿ, ಎಸ್.ಎನ್. ಪಡಸೆಟ್ಟಿ, ಬಸವರಾಜ ಗಿರಿನಿವಾಸ, ಮಂಜುನಾಥ ಅರೆಶಂಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net