ಪ್ರಜಾಪ್ರಭುತ್ವ ಹೊಂದಿರುವ ಗಣತಂತ್ರ ದೇಶ

26 vpt. 3
ವಿರಾಜಪೇಟೆಯ ಜೈ ಭಾರತ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಗಣರಾಜ್ಯೋತ್ಸವ ಆಚರಿಸಲಾಯಿತು. ಪುಷ್ಪರಾಜ್, ಜೀವನ್, ಪ್ರದೀಪ್, ಜೀವನ್ ಇದ್ದರು.
Published on

ವಿರಾಜಪೇಟೆ: ವಿಶ್ವಾದ್ಯಂತ ಅನೇಕ ದೇಶಗಳಿದ್ದರೂ ಇಂದು ಭಾರತ ದೇಶದ ಸಂವಿಧಾನವು ಉತೃಷ್ಟವಾದ ಸಂವಿಧಾನ, ಪ್ರಜಾಪ್ರಭುತ್ವ ಹೊಂದಿರುವ ಗಣತಂತ್ರ ದೇಶವಾಗಿದೆ ಎಂದು ವಕೀಲ ಪುಷ್ಪರಾಜ್ ಅಭಿಪ್ರಾಯಪಟ್ಟರು.

ಜೈ ಭಾರತ್ ಆಟೋ ಚಾಲಕರು ಮತ್ತು ಮಾಲೀಕರ ಸಂಘ ವಿರಾಜಪೇಟೆ ವತಿಯಿಂದ ಭಾನುವಾರ ಆಯೋಜಿಸಿದ್ದ 76ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಮಾನತೆ, ಪ್ರಜಾಪ್ರಭುತ್ವ, ಸರ್ವರಿಗೂ ಸಮಪಾಲು ಸಮ ಬಾಳು ಎಂಬ ತಳಹದಿಯೊಂದಿಗೆ ರಚನೆಗೊಂಡ ಸಂವಿಧಾನವನ್ನು ಎಲ್ಲ ವರ್ಗದವರು ಗೌರವಿಸುವಂತಾಗಬೇಕು. ಸಂವಿಧಾನದ ಮೌಲ್ಯಗಳಾದ, ಸಮಾನತೆ, ಪ್ರಜಾಪ್ರಭುತ್ವ, ಏಕತೆ ಮತ್ತು ಜಾತ್ಯತೀತ ವಾದಗಳನ್ನು ಒಳಗೊಂಡಂತೆ ರಚನೆಗೊಂಡ ಸಂವಿಧಾನವು ಇಂದು ವಿಶ್ವದಲ್ಲೇ ಅತ್ಯಂತ ಜನಪ್ರಿಯ ಹೊಂದಿರುವ ಗಣತಂತ್ರ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದರು.

ಸಂಘದ ಮಾಜಿ ಅಧ್ಯಕ್ಷರಾದ ಎಂ.ಎನ್.ಶಿವು ಮಾತನಾಡಿದರು. ಸಂಘದ ಅಧ್ಯಕ್ಷ ಬೀಕಚಂಡ ಪುಟ್ಟ ಬೆಳ್ಯಪ್ಪ, ಗೌ.ಅದ್ಯಕ್ಷರಾದ ಮಾಜಿ ಸೈನಿಕ ತೋರೇರ ಪ್ರಭು ಕುಟ್ಟಪ್ಪ, ಪ್ರದೀಪ್ ಉಪಸ್ಥಿತರಿದ್ದರು.

ಜೈ ಭಾರತ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಜೀವನ್, ಸಂಘಟನಾ ಕಾರ್ಯದರ್ಶಿ ಪ್ರದೀಪ್ ಮತ್ತು ಹಿರಿಯ, ಕಿರಿಯ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net