ನೋಟೀಸ್‌ಗೆ ಉತ್ತರ ಕೊಡಲಾಗುವುದು

A reply will be given to the notice
Published on

ಮಡಿಕೇರಿ:
ಅಮಿತ್ ಷಾ ಅವರಿಗೆ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇದೆ ಎಂದು ನಾನೇ ಹುಟ್ಟಿಸಿಕೊಂಡು ಹೇಳಿದಂತಹ ಮಾತಲ್ಲ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ವಿರಾಜಪೇಟೆಯಲ್ಲಿ‌ ಭಾನುವಾರ‌ ಸುದ್ದಿಗಾರರ ಜತೆ ಮಾತನಾಡಿದರು.

ಅಮಿತ್ ಷಾ ವಿರುದ್ಧ ಅದು ನಾನಾಗೆ ಹೇಳಿದ ಮಾತಲ್ಲ. 2010 ರಲ್ಲಿ ಸೊಹರ್ಬುದ್ದಿನ್ ಫೇಕ್ ಎನ್ಕೌಂಟರ್ ಪ್ರಕರಣದಲ್ಲಿ ಗುಜರಾತ್ ಕೋರ್ಟ್‌ಗೆ ಸಿಬಿಐ ಕೊಟ್ಟ ಹೇಳಿಕೆ ಅದು. ಅದೇ ಹೇಳಿಕೆಯನ್ನು ನಾನು ಪುನರ್ ಉಚ್ಛಾರ ಮಾಡಿದ್ದೇನೆ ಅಷ್ಟೇ. ನನ್ನ ಹೇಳಿಕೆಯಿಂದ ಬಿಜೆಪಿಗೆ ಕೋಪ ಬಂದಿದ್ದರೆ
ಮೊದಲು ಸಿಬಿಐ ಮೇಲೆ ಬಿಜೆಪಿ ಕೋಪ ಮಾಡಿಕೊಳ್ಳಬೇಕು. ಈಗಾಗಲೇ ನನಗೆ ಚುನಾವಣಾ ಆಯೋಗ ನೋಟಿಸ್ ಕೊಟ್ಟಿದೆ.
ಅದಕ್ಕೆ  ಸರಿಯಾದ ಉತ್ತರ ಏನು ಕೊಡಬೇಕೋ ಅದನ್ನು ಕೊಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net