ಉಲ್ಲಾಸ ಹೆಚ್ಚಿಸುವ ಟೆನ್ನಿಸ್ ಆಟ

snd tennis
ಎಫ್‌ಆರ್‌ಸಿಎಸ್ ಕ್ಲಬ್ ಅಧ್ಯಕ್ಷ ಸಿ.ಟಿ. ಪಾಟೀಲ್ ಮಾತನಾಡಿದರು.
Published on

ಸಿಂಧನೂರು: ಟೆನ್ನಿಸ್ ಆಟ ಕೇವಲ ಸ್ಪರ್ಧೆಯಾಗಿರದೆ, ಮನಸ್ಸನ್ನು ಸದಾ ಉಲ್ಲಾಸದಿಂದ ಇರುವಂತೆ ಮಾಡುತ್ತದೆ. ಸಿಂಧನೂರಿನಲ್ಲಿ ರಾಜ್ಯ, ರಾಷ್ಟ್ರಮಟ್ಟದ ಟೆನ್ನಿಸ್ ಪಂದ್ಯಾವಳಿ ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಮಾಜಿ ಪೊಲೀಸ್ ಉಪ ಮಹಾನಿರ್ದೇಶಕ ಗಗನ್‌ದೀಪ್ ಹೇಳಿದರು.

ನಗರದ ಎಫ್‌ಆರ್‌ಸಿಎಸ್ ಕ್ಲಬ್ ಆವರಣದಲ್ಲಿ ನಾರ್ತ್ ಕರ್ನಾಟಕ ಟೆನ್ನಿಸ್ ಅಸೋಸಿಯೇಷನ್ ಮತ್ತು ಎಫ್‌ಆರ್‌ಸಿಎಸ್ ಕ್ಲಬ್ ಭಾನುವಾರ ಏರ್ಪಡಿಸಿದ್ದ ಎನ್‌ಕೆಟಿಎ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಸಿಂಧನೂರು ಟೆನ್ನಿಸ್ ಆಟಗಾರರ ಮತ್ತು ಕ್ರೀಡಾ ಪ್ರಿಯರ ನೆಚ್ಚಿನ ತಾಣವಾಗಿದೆ ಎಂದರು.

ಎಫ್‌ಆರ್‌ಸಿಎಸ್ ಕ್ಲಬ್ ಅಧ್ಯಕ್ಷ ಸಿ.ಟಿ. ಪಾಟೀಲ್ ಮಾತನಾಡಿ, ಪ್ರತಿ ಕ್ರೀಡಾ ಪಟುವಿಗೆ ವಯಸ್ಸು ಕೇವಲ ಸಂಖ್ಯೆ. ಮನಸ್ಸು ಸದಾ ಯೌವನದಿಂದ ಕೂಡಿರುತ್ತದೆ. ಎಲ್ಲರ ಸಹಕಾರದಿಂದ ಟೆನ್ನಿಸ್ ಮತ್ತು ಷಟಲ್ ಬ್ಯಾಡ್ಮಿಂಟನ್ ಕೋರ್ಟ್‌ಗಳನ್ನು ನಿರ್ಮಿಸಲಾಗಿದೆ ಎಂದರು.

ಎನ್‌ಕೆಟಿಎ ಕಾರ್ಯದರ್ಶಿ ಗದಗಿನ ಶ್ರೀನಿವಾಸ ಬದಿ ಮಾತನಾಡಿ, ಮುಂಬರವ ದಿನಗಳಲ್ಲಿ ಟೆನ್ನಿಸ್ ಕೋಚಿಂಗ್ ಕ್ಯಾಂಪ್‌ಗಳನ್ನು ಆಯೋಜಿಸಿ ಪ್ರತಿಭಾನ್ವಿತರನ್ನು ಗುರುತಿಸುವ ಕೆಲಸ ಮಾಡುತ್ತೇವೆ ಎಂದರು. ಕೋಶಾಧ್ಯಕ್ಷ ಜಮಖಂಡಿಯ ಡಾ.ಸಚಿನ್ ಸೇಡಂಕರ್, ಬಸವರಾಜ್ ಸಿದ್ಧಾಂತಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net