ಚಿಮ್ಮಡದಲ್ಲಿ ಕರಿ ಹರಿದ ಕೆಂಪು ಎತ್ತು

CHIMMAD 23-01
ಚಿಮ್ಮಡ ಗ್ರಾಮದಲ್ಲಿ ಕಾರ ಹುಣ್ಣಿಮೆ ನಿಮಿತ್ತ ಸಂಭ್ರಮದಿಂದ ಎತ್ತುಗಳ ಕರಿ ಹರಿಯಲಾಯಿತು.
Published on

ಚಿಮ್ಮಡ: ಗ್ರಾಮದಲ್ಲಿ ಕಾರ ಹುಣ್ಣಿಮೆ ನಿಮಿತ್ತ ಶನಿವಾರ ಸಂಜೆ ಎತ್ತುಗಳ ಕರಿ ಹರಿಯಲಾಯಿತು.

ಗ್ರಾಮದ ಪ್ರಮುಖ ಬೀದಿಯಲ್ಲಿ ನಡೆದ ಕರಿ ಹರಿಯುವ ಸ್ಪರ್ಧೆಯಲ್ಲಿ ಕೆಂಪು ಎತ್ತು ಹಾಗೂ ಬಿಳಿ ಎತ್ತು ಭಾಗವಹಿಸಿದ್ದವು. ಗ್ರಾಮದ ಪ್ರಮುಖರು ತೆಂಗಿನಕಾಯಿ ಒಡೆದು ಸ್ಪರ್ಧೆಗೆ ಚಾಲನೆ ನೀಡಿದರು.

ಮೊದಲು ಬಿಳಿ ಎತ್ತು ಪ್ರಥಮ ಸ್ಥಾನದಲ್ಲಿತ್ತಾದರೂ ಕೆಂಪು ಎತ್ತು ಅದನ್ನು ಹಿಂದಿಕ್ಕಿ ಮುನ್ನುಗ್ಗಿ ಕರಿಹರಿಯಿತು. ಕೆಂಪು ಎತ್ತು ಮುಂದೆ ಬಂದಿದ್ದರಿಂದ ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಸುರಿದು ಫಲವತ್ತಾಗಿ ಬೆಳೆ ಬೆಳೆಯುತ್ತವೆ ಎಂಬ ಪ್ರತೀತಿ ಇದೆ.

ಎತ್ತುಗಳ ಕರಿ ಸಂದರ್ಭ ಯುವಕರು, ರೈತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಬಿ.ಎಸ್. ಪಾಟೀಲ, ಆರ್.ಎಂ. ಬಗನಾಳ, ಅಣ್ಣಪ್ಪಗೌಡ ಪಾಟೀಲ, ಪುಂಡಲೀಕಪ್ಪ ಪೂಜಾರಿ, ಬಾಳಪ್ಪ ಹಳಿಂಗಳಿ, ಗ್ರಾಪಂ ಮಾಜಿ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ, ಪಿಕೆಪಿಎಸ್ ಅಧ್ಯಕ್ಷ ಶಂಕರ ಬಟಕುರ್ಕಿ, ಪರಪ್ಪ ಪಾಲಭಾವಿ, ದುಂಡಪ್ಪ ಪಾಟೀಲ, ಅಶೋಕ ಧಡೂತಿ, ಗುರಪ್ಪ ಬಳಗಾರ ಹಾಗೂ ಗ್ರಾಪಂ ಸದಸ್ಯರು, ಪಿಕೆಪಿಎಸ್ ಬ್ಯಾಂಕ್ ನಿರ್ದೇಶಕರು, ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net