ಬಿಳಿಗಿರಿರಂಗನಬೆಟ್ಟದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಆತ್ಮಹತ್ಯೆ

Oplus_0
ಮಹದೇವನಾಯಕ
Published on

ಯಳಂದೂರು: ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ನಂಜನಗೂಡು ತಾಲೂಕಿನ ಕುಂಬರಹಳ್ಳಿ ಗ್ರಾಮದ ಮಹದೇವನಾಯಕ (42) ಆತ್ಮಹತ್ಯೆಗೆ ಶರಣಾದವರು. ಇವರು ಕುಂಬರಹಳ್ಳಿಯ ಮನೆಯಿಂದ ನಾಪತ್ತೆಯಾಗಿದ್ದಾರೆ ಎಂದು ಜೂ.5ರಂದು ಕವಲಂದೆ ಪೊಲೀಸ್ ಠಾಣೆಯಲ್ಲಿ ಇವರ ಸಂಬಂಕರು ದೂರು ದಾಖಲಿಸಿದ್ದರು. ಇವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು.

ಇವರು ಬಳಸುತ್ತಿದ್ದ ಬೈಕ್ ಬಿಳಿಗಿರಿರಂಗನ ಬೆಟ್ಟದಲ್ಲಿ ಪತ್ತೆಯಾಗಿತ್ತು. ಹಾಗಾಗಿ ಇವರು ಬೆಟ್ಟದಲ್ಲಿರಬೇಕು ಎಂಬುದರ ಬಗ್ಗೆ ಅನುಮಾನ ಮೂಡಿತ್ತು. ಈ ಬಗ್ಗೆ ಪೊಲೀಸರು ಬೆಟ್ಟದ ಕಮರಿಯ ಕೆಳಗೆ ಶೋಧ ನಡೆಸಿದ್ದರು. ಆದರೆ ಮೃತದೇಹ ಪತ್ತೆಯಾಗಿರಲಿಲ್ಲ. ನಂತರ ಡ್ರೋನ್ ಕ್ಯಾಮರಾ ಬಳಸಿ ನೋಡಿದಾಗ ಕಮರಿಯಲ್ಲಿರುವ ಬಂಡೆಗಳ ನಡುವೆ ಶನಿವಾರ ಇವರ ದೇಹ ಸಿಲುಕಿತ್ತು. ನಂತರ ಭಾನುವಾರ ಮೃತದೇಹವನ್ನು ಎತ್ತಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದ್ದು, ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ವಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net